ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಇಂಡೋ-ನೇಪಾಳ ಗೃಹ ಕಾರ್ಯದರ್ಶಿಗಳ ಸಭೆ

ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ ಭಾರತ ಮತ್ತು ನೇಪಾಳ ದೇಶಗಳ ಗೃಹ ಕಾರ್ಯದರ್ಶಿಗಳ ಸಭೆ ನಡೆಯುತ್ತಿದೆ.

Srinivasa Murthy VN
Updated On : 1 Jun 2013, 3:33 am

ಕಠ್ಮಂಡು: ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ ಭಾರತ ಮತ್ತು ನೇಪಾಳ ದೇಶಗಳ ಗೃಹ ಕಾರ್ಯದರ್ಶಿಗಳ ಸಭೆ ನಡೆಯುತ್ತಿದೆ.

ಸಭೆಯಲ್ಲಿ ಭಾರತದ ಗೃಹ ಕಾರ್ಯದರ್ಶಿ ಆರ್.ಕೆ.ಸಿಂಗ್ ಮತ್ತು ನೇಪಾಳ ಗೃಹ ಕಾರ್ಯದರ್ಶಿ ನವೀನ್ ಕುಮಾರ್ ಘಿಮಿರೆ ಅವರು ಪಾಲ್ಗೊಂಡಿದ್ದಾರೆ. ಮುಂದಿನ ಮೂರು ದಿನಗಳ ಕಾಲ ಈ ಸಭೆ ನಡೆಯಲಿದ್ದು, ಸಭೆಯಲ್ಲಿ ಉಭಯ ದೇಶಗಳ ಗಡಿ ಭದ್ರತಾ ಸುಧಾರಣೆ ಮತ್ತು ನಿರ್ವಹಣೆಯ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತದೆ.

ಸಭೆಯಲ್ಲಿ ಭಾರತದಿಂದ 30 ಅಧಿಕಾರಿಗಳು ಪಾಲ್ಗೊಂಡಿದ್ದು, ಖೋಟಾ ನೋಟು ದಂಧೆಯ ಕುರಿತು ಚರ್ಚಿಸುವ ಸಾಧ್ಯತೆ ಇದೆ. ಅಂತೆಯೇ ಭಯೋತ್ಪಾದನೆ, ಅಕ್ರಮ ಶಸ್ತ್ರಾಸ್ತ್ರ ರವಾನೆ, ಮಾನವ ಕಳ್ಳಸಾಗಣೆ ಮತ್ತು ಖೋಟಾ ನೋಟು ರವಾನೆ ಸೇರಿದಂತೆ ಇನ್ನಿತರೆ ಸಮಸ್ಯೆಗಳ ಕುರಿತು ಅಧಿಕಾರಿಗಳು ಚರ್ಚಿಸಲಿದ್ದಾರೆ.

ಈ ಬಗ್ಗೆ ನಾಳೆ ಎರಡೂ ದೇಶಗಳ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಯಲ್ಲಿದ್ದು, ನೇಪಾಳ ಪೊಲೀಸರಿಗೆ ಭಾರತದಲ್ಲಿ ವಿಶೇಷ ತರಬೇತಿ ನೀಡುವ ಒಪ್ಪಂದವನ್ನು ಮುಂದುವರೆಸುವುದಕ್ಕೆ ಅಧಿಕಾರಿಗಳು ಸಹಿಹಾಕುವ ಸಾಧ್ಯತೆ ಇದೆ.

ಕಳೆದ ಬಾರಿಯ 2012ರ ಸಭೆ ನವದೆಹಲಿಯಲ್ಲಿ ನಡೆದಿದ್ದು, ವಾಡಿಕೆಯಂತೆ ಈ ಬಾರಿಯ ಸಭೆಯನ್ನು ನೇಪಾಳ ರಾಜಧಾನಿಯಲ್ಲಿ ನಡೆಸಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement