ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮತ್ತೆ ಅಬ್ಬರಿಸಿದ ಮಾವೋವಾದಿಗಳು: ಸಿಆರ್‌ಪಿಎಫ್ ಯೋಧನ ಹತ್ಯೆ

ಇತ್ತೀಚೆಗಷ್ಟೇ ಛತ್ತೀಸ್‌ಗಡಲ್ಲಿ ಮಾರಣ ಹೋಮ ನಡೆಸಿದ್ದ ಮಾವೋವಾದಿಗಳು ಶನಿವಾರ ಯೋಧನೊಬ್ಬನನ್ನು ಹತ್ಯೆಗೈದಿದ್ದಾರೆ.

Srinivasa Murthy VN
Updated On : 1 Jun 2013, 6:29 am

ರಾಯಪುರ: ಇತ್ತೀಚೆಗಷ್ಟೇ ಛತ್ತೀಸ್‌ಗಡಲ್ಲಿ ಮಾರಣ ಹೋಮ ನಡೆಸಿದ್ದ ಮಾವೋವಾದಿಗಳು ಶನಿವಾರ ಮತ್ತೆ ಅಬ್ಬರಿಸಿದ್ದು, ಸಿಆರ್‌ಪಿಎಫ್ ಯೋಧನೊಬ್ಬನನ್ನು ಹತ್ಯೆಗೈದಿದ್ದಾರೆ.

ಛತ್ತೀಸ್‌ಗಡದ ಧಾಮತ್ರಿ ಜಿಲ್ಲೆಯಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಖಳಾರಿ ಗ್ರಾಮದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮಾವೋವಾದಿಗಳ ಗುಂಡಿಗೆ ಸಿಆರ್‌ಪಿಎಫ್‌ನ ಸಹಾಯಕ ಕಮಾಂಡರ್ ಎಸ್.ಕೆ.ದಾಸ್ ಮೃತಪಟ್ಟಿದ್ದಾರೆ. ಗ್ರಾಮದಲ್ಲಿ ಮಾವೋವಾದಿಗಳು ಅಡಗಿರುವ ಕುರಿತು ಮಾಹಿತಿ ಪಡೆದ ಸಿಆರ್‌ಪಿಎಫ್‌ನ 211ನೇ ಬೆಟಾಲಿಯನ್ ತಂಡ ಕೂಡಲೇ ಗ್ರಾಮಕ್ಕೆ ಧಾವಿಸಿ ಶೋಧ ಕಾರ್ಯ ಆರಂಭಿಸಿತು.

ಸುಮಾರು 50 ಸದಸ್ಯರ ಸಿಆರ್‌ಪಿಎಫ್ ತಂಡದ ಯೋಧರು ಕಾರ್ಯಾಚರಣೆಗೆ ಇಳಿದಿದ್ದರು. ಆದರೆ ಯೋಧರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ ಮಾವೋವಾದಿಗಳು ಓರ್ವ ಕಮಾಂಡರ್‌ನನ್ನು ಹತ್ಯೆಗೈದಿದ್ದಾರೆ. ಸುಮಾರು 2 ಗಂಟೆಗೂ ಅಧಿಕ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಹಲವು ಯೋಧರು ಗಾಯಗೊಂಡಿದ್ದು, ಮಾವೋವಾದಿಗಳ ಸಾವು-ನೋವಿನ ಕುರಿತು ವರದಿಯಾಗಿಲ್ಲ.

ಮೇ 25ರಂದು ಬಸ್ತಾರ್ ಗ್ರಾಮದಲ್ಲಿ ಕಾಂಗ್ರೆಸ್ ರ್ಯಾಲಿ ವೇಳೆ ನಡೆದಿದ್ದ ಮಾವೋವಾದಿಗಳ ದಾಳಿಯಿಂದಾಗಿ ಛತ್ತೀಸ್‌ಗಡದ ಪ್ರಮುಖ ನಾಯಕರು ಸೇರಿದಂತೆ ಸುಮಾರು 30 ಜನರು ಸಾವಿಗೀಡಾಗಿದ್ದರು. ಈ ಘಟನೆ ಹಸಿರಾಗಿರುವಾಗಲೇ ಮತ್ತೆ ಮಾವೋವಾದಿಗಳು ಯೋಧನನ್ನು ಹತ್ಯೆಗೈದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement