ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಅಫಘಾತ: ಶಿವಾನಿ ಚಿತ್ರ ನಾಯಕ ಅನಿಲ್ ದುರ್ಮರಣ

ಮಲ್ಲೇಶ್ವರಂನಲ್ಲಿ ಸಂಭವಿಸಿದ ಬೈಕ್ ಅಫಘಾತದಲ್ಲಿ ಶಿವಾನಿ ಕನ್ನಡ ಚಿತ್ರ ನಾಯಕ ನಟ ಅನಿಲ್ ಕುಮಾರ್ ದುರ್ಮರಣಕ್ಕೀಡಾಗಿದ್ದಾರೆ.

Srinivasa Murthy VN
Updated On : 2 Oct 2013, 3:04 am

ಬೆಂಗಳೂರು: ಮಲ್ಲೇಶ್ವರಂನಲ್ಲಿ ಸಂಭವಿಸಿದ ಬೈಕ್ ಅಫಘಾತದಲ್ಲಿ ಶಿವಾನಿ ಕನ್ನಡ ಚಿತ್ರ ನಾಯಕ ನಟ ಅನಿಲ್ ಕುಮಾರ್ ದುರ್ಮರಣಕ್ಕೀಡಾಗಿದ್ದಾರೆ.

ಮಂಗಳವಾರ ತಡ ರಾತ್ರಿಯಲ್ಲಿ ತಮ್ಮ ಬೈಕ್‌ನಲ್ಲಿ ತೆರಳುತ್ತಿದ್ದ ನಟ ಅನಿಲ್ ಕುಮಾರ್ (32) ಅವರು ಮಲ್ಲೇಶ್ವರಂ 17ನೇ ಕ್ರಾಸ್ ಬಳಿ ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಸ್ಥಳೀಯ ಸಹಾಯದಿಂದ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ.

ಉದ್ಯಮಿ ಕೂಡ ಆಗಿರುವ ಅನಿಲ್ ಕುಮಾರ್ ಅವರು, ಕನ್ನಡ ಚಿತ್ರ ಶಿವಾನಿಯಲ್ಲಿ ನಾಯಕನಾಗಿ ಅಭಿನಯಿಸಿದ್ದರು. ಅಲ್ಲದೆ ಕಿರುತೆರೆಯ ಕೆಲವು ಧಾರಾವಾಹಿಗಳಲ್ಲಿಯೂ ಕೂಡ ಅಭಿನಯಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement