ರಾಷ್ಟ್ರಪಿತನಿಗೆ ಪ್ರಧಾನಿ, ಸೋನಿಯಾ, ಗಣ್ಯರ ನಮನ
ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಹಾತ್ಮ ಗಾಂಧಿ ಅವರ ಸ್ಮಾರಕ ರಾಜ್ಘಾಟ್ಗೆ ತೆರಳಿ ನಮನ ಸಲ್ಲಿಸಿದರು.
ನವದೆಹಲಿ: ಗಾಂಧಿ ಜಯಂತಿ ಹಿನ್ನಲೆಯಲ್ಲಿ ಬುಧವಾರ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಹಾತ್ಮ ಗಾಂಧಿ ಅವರ ಸ್ಮಾರಕ ರಾಜ್ಘಾಟ್ಗೆ ತೆರಳಿ ನಮನ ಸಲ್ಲಿಸಿದರು.
ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ 144ನೇ ಜನ್ಮದಿನಾಚರಣೆಯ ಅಂಗವಾಗಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಬಿಜೆಪಿ ಹಿರಿಯ ಮುಖಂಡ ಎಲ್ಕೆ ಅಡ್ವಾಣಿ ಸೇರಿದಂತೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಮಲ್ನಾಥ್ ಅವರು ಸೇರಿದಂತೆ ಹಲವು ಗಣ್ಯರು ಮಹಾತ್ಮ ಗಾಂಧಿಜೀ ಸಮಾಧಿಗೆ ನಮನ ಸಲ್ಲಿಸಿದರು.
ಎಲ್ಲ ಗಣ್ಯರು ಗಾಂಧಿ ಸ್ಮಾರಕಕ್ಕೆ ಹೂಗುಚ್ಛವನ್ನಿಟ್ಟು ಒಂದು ನಿಮಿಷ ಮೌನವನ್ನಾಚರಿಸಿ ನಮನ ಸಲ್ಲಿಸಿದರು. ಅಕ್ಟೋಬರ್ 2ರಂದು ಗಾಂಧಿ ಜನ್ಮದಿನವಾಗಿದ್ದು, ದೇಶಾದ್ಯಂತ ಇಂದು ಗಾಂಧಿ ಜಯಂತಿಯಾಗಿ ಆಚರಿಸಲಾಗುತ್ತದೆ. ಅಂತೆಯೇ ಮಹಾತ್ಮ ಗಾಂಧಿಜಿ ಅವರ ಅಹಿಂಸಾ ಚಳುವಳಿಗೆ ಪ್ರತೀಕವಾಗಿ ಇಂದು ವಿಶ್ವಾಧ್ಯಂತ ಅಹಿಂಸಾ ದಿನವಾಗಿ ಅಚರಿಸಲಾಗುತ್ತದೆ.