ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಶಟ್‌ಡೌನ್ ಎಫೆಕ್ಟ್: ಒಬಾಮ ಏಷ್ಯಾ ಪ್ರವಾಸದಲ್ಲಿ ಕಡಿತ

ಅಮೆರಿಕದಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದಾಗಿ ಸರ್ಕಾರಿ ಸಂಸ್ಥೆಗಳ ಸೇವೆ ಸ್ಥಗಿತಗೊಂಡ ಪರಿಣಾಮದಿಂದ ಒಬಾಮ ಅವರ ಏಷ್ಯಾ ಪ್ರವಾಸ ಕಡಿತಗೊಂಡಿದೆ.

Srinivasa Murthy VN
Updated On : 2 Oct 2013, 4:00 am

ನ್ಯೂಯಾರ್ಕ್: ಅಮೆರಿಕದಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದಾಗಿ ಸರ್ಕಾರಿ ಸಂಸ್ಥೆಗಳ ಸೇವೆ ಸ್ಥಗಿತಗೊಂಡ ಪರಿಣಾಮದಿಂದ ಒಬಾಮ ಅವರ ಏಷ್ಯಾ ಪ್ರವಾಸ ಕಡಿತಗೊಂಡಿದೆ.

ಒಬಾಮ ಸರ್ಕಾರ ವಾರ್ಷಿಕ ಬಜೆಟ್‌ಗೆ ಕಾಂಗ್ರೆಸ್ ಅನುಮೋದನೆ ಪಡೆಯುವಲ್ಲಿ ವಿಫಲಾವಾದ ಹಿನ್ನಲೆಯಲ್ಲಿ ಬಿಕ್ಕಟ್ಟು ಉಂಟಾಗಿದ್ದು, ಇದರ ಪರಿಣಾಮ ಇದೀಗ ಸ್ವತಃ ಅಮೆರಿಕ ಅಧ್ಯಕ್ಷ ಒಬಾಮ ಅವರಿಗೆ ತಟ್ಟಿದೆ. ಆರ್ಥಿಕ ಬಿಕ್ಕಟ್ಟಿನಿಂದಾಗಿ ಒಬಾಮ ಅವರ ಉದ್ದೇಶಿತ ಏಷ್ಯಾ ಪ್ರವಾಸದಲ್ಲಿ ಕಡಿತಗೊಳಿಸಲಾಗಿದೆ.

ಶನಿವಾರದಿಂದ ಆರಂಭಗೊಳ್ಳಲಿರುವ ಈ ಪ್ರವಾಸದಲ್ಲಿ ಒಬಾಮ ಮಲೇಷ್ಯಾ, ಬ್ರೂನೇ ಮತ್ತು ಫಿಲಿಫೈನ್ಸ್ ದೇಶಗಳಿಗೆ ಭೇಟಿ ನೀಡಬೇಕಿತ್ತು. ಇದೀಗ ಪ್ರವಾಸ ಕಡಿತಗೊಂಡ ಹಿನ್ನಲೆಯಲ್ಲಿ ಮಲೇಷ್ಯಾದ ಕೌಲಾಲಂಪುರ ಮತ್ತು ಫಿಲಿಫೈನ್ಸ್ ಪ್ರವಾಸವನ್ನು ರದ್ದು ಪಡಿಸಲಾಗಿದೆ. ಒಬಾಮ ಅವರ ಉದ್ದೇಶಿತ ಆರೋಗ್ಯ ವಿಮೆ ಯೋಜನೆ ವಿರೋಧಿಸಿದ್ದ ರಿಪಬ್ಲಿಕನ್ ಪಕ್ಷದ ಸದಸ್ಯರು ಯೋಜನೆಗೆ ನೀಡುವ ನೆರವನ್ನು ಕಡಿಮೆ ಮಾಡಬೇಕು ಎಂದು ಪಟ್ಟು ಹಿಡಿದ ಹಿನ್ನಲೆಯಲ್ಲಿ ವಾರ್ಷಿಕ ಬಜೆಟ್‌ಗೆ ಕಾಂಗ್ರೆಸ್ ಅನುಮೋದನೆ ಪಡೆಯುವಲ್ಲಿ ಒಬಾಮ ಸರ್ಕಾರ ವಿಫಲವಾಗಿತ್ತು. ಇದರಿಂದ ಅಮೆರಿಕದ ಅರ್ಥಿಕತೆಗೆ ಭಾರಿ ಪೆಟ್ಟು ಬಿದಿದ್ದು 18 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಮೆರಿಕದ ಸರ್ಕಾರಿ ಕಚೇರಿಗಳಿಗೆ ಬೀಗ ಜಡಿಯಲಾಗಿದೆ.

ಪರಿಣಾಮವಾಗಿ ಸರ್ಕಾರಿ ಕಚೇರಿಗಳನ್ನು ಅನಿರ್ಧಿಷ್ಟಾವಧಿಗೆ ಮುಚ್ಚುವಂತೆ ವೈಟ್ ಹೌಸ್ ಆದೇಶ ನೀಡಿದೆ. ಸರ್ಕಾರದ ಈ ದಿಢೀರ್ ನಿರ್ಧಾರದಿಂದಾಗಿ ದೇಶಾದ್ಯಂತ ವ್ಯವಹರಿಸುತ್ತಿದ್ದ ಲಕ್ಷಾಂತರ ಸರ್ಕಾರಿ ನೌಕರರು ವೇತನವಿಲ್ಲದೆ ರಜೆಯಲ್ಲಿ ತೆರಳ ಬೇಕಿದ್ದು, ನೌಕರರ ಸ್ಥಿತಿ ಇದೀಗ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement