ಸಿಕ್ಕಿಂನಲ್ಲಿ ಪ್ರಬಲ ಭೂಕಂಪನ: 5 ತೀವ್ರತೆ ದಾಖಲು
ಶಿಲ್ಲಾಂಗ್: ಸಿಕ್ಕಿಂನಲ್ಲಿ ಗುರುವಾರ ಪ್ರಬಲ ಭಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.0ಯಷ್ಟು ತೀವ್ರತೆ ದಾಖಲಾಗಿದೆ.
ಸಿಕ್ಕಿಂನ ಗ್ಯಾಂಗಟಕ್ ಭೂಕಂಪನದ ಕೇಂದ್ರ ಬಿಂದು ಎಂದು ತಿಳಿದುಬಂದಿದ್ದು, ಗ್ಯಾಂಗ್ಟಕ್ನಲ್ಲಿನ ಅನೇಕ ಬೃಹತ್ ಕಟ್ಟಡಗಳು ಬಿರುಕು ಬಿಟ್ಟಿವೆ. ಕಂಪನದ ಅನುಭವವಾಗುತ್ತಿದ್ದಂತೆಯೇ ಕಟ್ಟಡಗಳಲ್ಲಿದ್ದ ಜನರು ಗಾಬರಿಯಿಂದ ಹೊರಗೆ ಓಡಿ ಬಂದಿದ್ದಾರೆ.
ಭೂಕಂಪನದ ಅನುಭವವಾಗುತ್ತಿದ್ದಂತೆಯ ಗ್ಯಾಂಗಟಕ್ನ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅಲ್ಲದೆ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಸಂಚಾರ ಅಸ್ತವ್ಯಸ್ಥವಾಗಿದೆ.