ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಚಿತ್ತೂರು ಕಾರ್ಯಾಚರಣೆ ಅಂತ್ಯ: ಚೆನ್ನೈಗೆ ಉಗ್ರರ ರವಾನೆ

ಆಂಧ್ರದ ಚಿತ್ತೂರಿನಲ್ಲಿ ಅಡಗಿ ಕುಳಿತ್ತಿದ್ದ ಉಗ್ರರಿಗಾಗಿ ನಡೆಯುತ್ತಿದ್ದ ಪೊಲೀಸ್ ಕಾರ್ಯಾಚರಣೆ ಅಂತ್ಯ ವಾಗಿದ್ದು, ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ.

Srinivasa Murthy VN
Updated On : 5 Oct 2013, 3:40 am

ಹೈದರಾಬಾದ್: ಆಂಧ್ರ ಪ್ರದೇಶದ ಚಿತ್ತೂರಿನಲ್ಲಿ ಅಡಗಿ ಕುಳಿತ್ತಿದ್ದ ಉಗ್ರರಿಗಾಗಿ ನಡೆಯುತ್ತಿದ್ದ ಪೊಲೀಸ್ ಕಾರ್ಯಾಚರಣೆ ಅಂತ್ಯವಾಗಿದ್ದು, ಅಡಗಿ ಕುಳಿತಿದ್ದ ಇಬ್ಬರು ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ.

ಅಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದ್ದ ನಾಲ್ಕು ಉಗ್ರರು ಜುಲೈ 19ರಂದು ತಮಿಳುನಾಡಿನ ಸೇಲಂನಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಮೇಶ್‌ರನ್ನು ಹತ್ಯೆಗೈದಿದ್ದರು. ಹತ್ಯೆಯ ಬಳಿಕ ತಮಿಳುನಾಡು ಪೊಲೀಸರ ಕಣ್ತಪ್ಪಿಸಿ ಆಂಧ್ರ ಪ್ರದೇಶಕ್ಕೆ ಪರಾರಿಯಾಗಿದ್ದ ಉಗ್ರರು ಉಭಯ ರಾಜ್ಯಗಳ ಗಡಿಜಿಲ್ಲೆ ಚಿತ್ತೂರಿನ ಮನೆಯೊಂದರಲ್ಲಿ ಅಡಗಿ ಕುಳಿತ್ತಿದ್ದರು. ಉಗ್ರರ ಕುರಿತು ಮಾಹಿತಿ ತಿಳಿದ ಆಂಧ್ರ ಪ್ರದೇಶ ಪೊಲೀಸರು ಕೂಡಲೇ ತಮಿಳುನಾಡಿನ ಪೊಲೀಸರಿಗೆ ವಿಷಯ ಮುಟ್ಟಿಸಿ ಇಂದು ಕಾರ್ಯಾಚರಣೆಗೆ ಮುಂದಾದರು.

ಇಂದು ಬೆಳ್ಳಗ್ಗೆ ಆರಂಭವಾದ ಪೊಲೀಸ್ ಕಾರ್ಯಾಚರಣೆ ಸತತ 8 ಗಂಟೆಗಳ ಬಳಿಕ ಅಂತ್ಯವಾಗಿದೆ. 8 ಗಂಟೆಗಳಿಂದ ಉಗ್ರರೊಂದಿಗೆ ನಡೆಯುತ್ತಿದ್ದ ಗುಂಡಿನ ಚಕಮಕಿಯಲ್ಲಿ ತಮಿಳುನಾಡು ಸರ್ಕಲ್ ಇನ್ಸ್‌ಪೆಕ್ಟರ್ ರಮೇಶ್ ಮೃತಪಟ್ಟಿದ್ದು, ಇನ್ನಿಬ್ಬರು ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದರು.

ಅಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದ ಉಗ್ರರಾದ ಅಬು ಬೇಕರ್ ಸಿದ್ದಿಕ್ ಮತ್ತು ಫನ್ನಾ ಇಸ್ಮಾಯಿಲ್, ಫಕ್ರುದ್ದೀನ್ ಮತ್ತು ಬಿಲಾಲ್ ಎಂಬುವವರನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಉಗ್ರರನ್ನು ಭಾರಿ ಭಧ್ರತೆಯ ನಡುವೆ ಪೊಲೀಸರು ಚೆನ್ನೈಗೆ ಕರೆದೊಯ್ಯುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement