ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸಾಲ ತಗೊಳ್ಳಿ, ಟೋಪಿ ಹಾಕಿ ಪರವಾಗಿಲ್ಲ: ಜಿ.ಪರಮೇಶ್ವರ್

ಅಲ್ಪ ಸಂಖ್ಯಾತರ ಅಭಿವದ್ಧಿಗೆ ಸರ್ಕಾರ ನೀಡುವ ಸಾಲವನ್ನು ತೆಗೆದುಕೊಂಡು ಮರುಪಾವತಿ ಮಾಡದಿದ್ದರೂ ಪರವಾಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಹೇಳಿದ್ದಾರೆ.

Srinivasa Murthy VN
Updated On : 5 Oct 2013, 6:40 am

ಬೆಂಗಳೂರು: ಅಲ್ಪ ಸಂಖ್ಯಾತರ ಅಭಿವದ್ಧಿಗೆ ಸರ್ಕಾರ ನೀಡುವ ಸಾಲವನ್ನು ತೆಗೆದುಕೊಂಡು ಮರುಪಾವತಿ ಮಾಡದಿದ್ದರೂ ಪರವಾಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಅಲ್ಪ ಸಂಖ್ಯಾತ ಸಮುದಾಯದ ವಿಚಾರ ಸಂಕೀರಣದಲ್ಲಿ ಪಾಲ್ಗೊಂಡಿದ್ದ ಪರಮೇಶ್ವರ್ ಅವರು, ಅಲ್ಪ ಸಂಖ್ಯಾತರ ಅಭಿವೃದ್ಧಿಗೆ ಸರ್ಕಾರ  ವಿವಿಧ ಯೋಜನೆಗಳ ಮೂಲಕ ಸಾಲ ನೀಡುತ್ತದೆ. ಹೀಗೆ ಸಾಲ ಪಡೆದ ಫಲಾನುಭವಿಗಳು ತೆಗೆದುಕೊಂಡ ಸಾಲವನ್ನು ತೀರಸದಿದ್ದರೂ ಪರವಾಗಿಲ್ಲ ಎಂದು ಹೇಳಿದ್ದಾರೆ.

'ಅಲ್ಪ ಸಂಖ್ಯಾತರ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸಾಲ ಪಡೆದ ಫಲಾನುಭವಿಗಳು ನಾನಾ ಕಾರಣಗಳಿಂದ ಸಾಲವನ್ನು ಮರುಪಾವತಿ ಮಾಡಲಾಗುವುದಿಲ್ಲ. ಹಿಂದಿನ ಸರ್ಕಾರಗಳು ಕೂಡ ಅಲ್ಪ ಸಂಖ್ಯಾತರಿಗೆ ಸಾಲ ನೀಡಿದ್ದವು. ಕಳೆದ ಸರ್ಕಾರದ ಅಧಿಕಾರದ ಅವಧಿಯಲ್ಲಿ ನಾನಾ ಕಾರಣಗಳಿಂದ ಸರ್ಕಾರದ ಬೊಕ್ಕಸಕ್ಕೆ ಸಾವಿರ ಕೋಟಿಗಳಷ್ಟು ನಷ್ಟವಾಗಿತ್ತು. ಅವರು ಸರ್ಕಾರಕ್ಕೆ ಸಾವಿರ ಕೋಟಿ ಟೋಪಿ ಹಾಕಿದ್ದರು. ನಮ್ಮವರು (ಅಲ್ಪ ಸಂಖ್ಯಾತರು) ಒಂದಿಷ್ಟು ಟೋಪಿ ಹಾಕಿದರೆ ತಪ್ಪೇನು? 'ಇದೊಂದು ಅಭಿವೃದ್ಧಿಯ ಭಾಗವಾಗಿದೆ" ಎಂದು ಪರಮೇಶ್ವರ್ ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಅವರ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದ್ದು, ಅವರ ಹೇಳಿಕೆಗೆ ಸಾಮಾಜಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಅಲ್ಪ ಸಂಖ್ಯಾತರ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳ ಮೂಲಕ ಸರ್ಕಾರ ಫಲಾನುಭವಿಗಳಿಗೆ ಸಾಲ ನೀಡುತ್ತದೆ. ಈ ಸಾಲದ ಮೊತ್ತವನ್ನು ಅಲ್ಪ ಸಂಖ್ಯಾತ ನಿಗಮಗಳ ಮೂಲಕ ಸರ್ಕಾರ ಫಲಾನುಭವಿಗಳಿಗೆ ರವಾನಿಸುತ್ತದೆ. ಅವರಿಂದ ಕಡಿಮೆ ಪ್ರಮಾಣದ ಬಡ್ಡಿಯೊಂದಿಗೆ ಸಾಲ ಮರುಪಾವತಿ ಮಾಡಿಸಿಕೊಳ್ಳುವುದು ಮತ್ತು ಆ ಮೂಲಕ ಅಲ್ಪ ಸಂಖ್ಯಾತರ ಅಭಿವೃದ್ಧಿಗೆ ಸಹಾಯಕವಾಗುವುದು ಸರ್ಕಾರದ ಧ್ಯೇಯೋದ್ದೇಶವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement