ದೆಹಲಿ ಬಾಲಾಪರಾಧಿ ಗೃಹದಿಂದ 33 ಬಾಲಕರ ಪರಾರಿ
ದೆಹಲಿ ಬಾಲಾಪರಾಧಿಗಳ ಗೃಹದಿಂದ 33 ಬಾಲಕರು ಪರಾರಿಯಾಗಿದ್ದು, ತತ್ಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು 14 ಮಂದಿ ಬಾಲಾಪರಾಧಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನವದೆಹಲಿ: ದೆಹಲಿ ಬಾಲಾಪರಾಧಿಗಳ ಗೃಹದಿಂದ 33 ಬಾಲಕರು ಪರಾರಿಯಾಗಿದ್ದು, ತತ್ಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು 14 ಮಂದಿ ಬಾಲಾಪರಾಧಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದೆಹಲಿಯ ಮುಖರ್ಜಿ ನಗರದಲ್ಲಿರುವ ಸೇವಾಕುಟೀರ ಬಾಲಾಪಾರಾಧಿಗಳ ಗೃಹದಿಂದ 33 ಬಾಲಕರು ತಪ್ಪಿಸಿಕೊಂಡಿರುವ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ. ನಿನ್ನೆ ರಾತ್ರಿ 8:30ರ ಹೊತ್ತಿನಲ್ಲಿ ಸುಮಾರು 58 ಬಾಲಕರು ಸೇವಾಕುಟೀರ ಕಟ್ಟಡದ ಟೆರೇಸ್ ಮೇಲೆ ತೆರಳಿ ಅಡುಗೆ ಮನೆಯಿಂದ ತಂದಿದ್ದ ಗ್ಯಾಸ್ ಸಿಲಿಂಡರನ್ನು ಹೊತ್ತಿಸಿದ್ದಾರೆ. ಅಲ್ಲದೆ ಅಗ್ನಿ ಅನಾಹುತ ನಡೆದಿದೆ ಎಂದು ಪ್ರವೇಶದ್ವಾರದಲ್ಲಿದ್ದ ಪೊಲೀಸರನ್ನು ಟೆರೇಸ್ಗೆ ಕರೆಸಿ ನಂತರ ಪ್ರವೇಶ ದ್ವಾರವನ್ನು ಮುರಿದು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಪರಾರಿಯಾಗಿದ್ದ ಬಾಲಕರ ಪೈಕಿ 14 ಮಂದಿ ಬಾಲಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನುಳಿದ ಬಾಲಕರಿಗಾಗಿ ಪೊಲೀಸರು ಶೋಧ ಮುಂದುವರೆಸಿದ್ದು, ಶೀಘ್ರದಲ್ಲಿಯೇ ಅವರನ್ನು ಬಂಧಿಸುವುದಾಗಿ ಹೇಳಿದ್ದಾರೆ.