ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಅಮೆರಿಕ, ಜರ್ಮನಿ ವೈದ್ಯರಿಗೆ ನೊಬೆಲ್ ಪಾರಿತೋಷಕ

ಅಮೆರಿಕದ ಜೇಮ್ಸ್ ರಾಥ್‌ಮನ್, ರಾಂಡಿ ಶೆಕ್‌ಮನ್ ಮತ್ತು ಜರ್ಮನಿ ಮೂಲದ ವೈದ್ಯಕೀಯ ಸಂಶೋಧಕ ಥಾಮಸ್ ಸ್ಯೂದ್ ಅವರಿಗೆ ನೊಬೆಲ್ ವೈದ್ಯಕೀಯ..

Srinivasa Murthy VN
Updated On : 7 Oct 2013, 6:09 am

ಸ್ಟಾಕ್‌ಹಾಮ್: ಅಮೆರಿಕದ ಜೇಮ್ಸ್ ರಾಥ್‌ಮನ್, ರ್ಯಾಂಡಿ ಶೆಕ್‌ಮನ್ ಮತ್ತು ಜರ್ಮನಿ ಮೂಲದ ವೈದ್ಯಕೀಯ ಸಂಶೋಧಕ ಥಾಮಸ್ ಸ್ಯೂದ್ ಅವರಿಗೆ ನೊಬೆಲ್ ವೈದ್ಯಕೀಯ ಪಾರಿತೋಷಕ ಲಭಿಸಿದೆ.

ಜೀವಕೋಶದ ಒಳಗೆ ಹಾರ್ಮೋನುಗಳು, ಕಿಣ್ವಗಳು ಮತ್ತು ಇತರ ಪ್ರಮುಖ ವಸ್ತುಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬುದರ ಕುರಿತಾಗಿ ಈ ಮೂವರು ನಡೆಸಿದ್ದ ವೈದ್ಯಕೀಯ ಸಂಶೋಧನೆಗಾಗಿ ನೋಬೆಲ್ ವೈದ್ಯಕೀಯ ಪ್ರಶಸ್ತಿ ನೀಡಲಾಗುತ್ತಿದೆ.

ಸ್ವೀಡನ್ ರಾಜಧಾನಿ ಸ್ಟಾಕ್‌ಹಾಮ್‌ನಲ್ಲಿ ಇಂದು ಸಭೆ ನಡೆಸಿದ ನೊಬೆಲ್ ಕಾರ್ಯಕಾರಿ ಸಮಿತಿಯು ಈ ಮೂವರು ವೈದ್ಯರಿಗೆ ವೈದ್ಯಕೀಯ ವಿಭಾಗದ ನೊಬೆಲ್ ಪ್ರಶಸ್ತಿ ನೀಡಲು ತೀರ್ಮಾನಿಸಿದೆ. ಈ ಮೂವರು ನಡೆಸಿದ್ದ ಕೋಶಗಳಲ್ಲಿನ ನಿಯಂತ್ರಣ ವ್ಯವಸ್ಥೆಯ ಸಂಶೋಧನೆಯಿಂದಾಗಿ ಸಕ್ಕರೆ ಖಾಯಿಲೆಯ ಕುರಿತಾಗಿ ಆಳವಾಗಿ ಅಧ್ಯಯನ ಮಾಡಲು ಸಾಹಾಯಕವಾಗಿದೆ. ಇದೇ ಕಾರಣಕ್ಕಾಗಿ ಇವರಿಗೆ ಪ್ರಶಸ್ತಿ ಘೋಷಿಸಲಾಗಿದೆ ಎಂದು ಸಮಿತಿ ಸದಸ್ಯ ಗೋರನ್ ಹ್ಯಾನ್ಸನ್ ಅವರು ತಿಳಿಸಿದ್ದಾರೆ.

ನೊಬೆಲ್ ಪ್ರಶಸ್ತಿ ಲಭಿಸಿರುವ ಕುರಿತು ತಮ್ಮ ಸಂತಸ ವ್ಯಕ್ತಪಡಿಸಿರುವ 62 ವರ್ಷದ ವೈದ್ಯ ಜೇಮ್ಸ್ ರಾಥ್‌ಮನ್ ಅವರು, ಸಮಿತಿ ನಿರ್ಧಾರದಿಂದ ನನಗೆ ಹೆಮ್ಮೆಯಾಗುತ್ತಿದೆ. ಈ ಸಮಯದಲ್ಲಿ ದೇವರನ್ನು ನೆನೆಯಲು ಇಚ್ಛಿಸುತ್ತೇನೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement