ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಅಸಾರಾಂ ಪುತ್ರನ ವಿರುದ್ಧ ನೋಟಿಸ್ ಜಾರಿ

ವಿವಾದಿತ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುವಿನ ಪುತ್ರ ನಾರಾಯಣ ಸಾಯಿ ವಿರುದ್ಧ ಸೂರತ್ ಪೊಲೀಸರು ಲುಕ್‌ಔಟ್ ನೋಟಿಸ್ ಜಾರಿ ಮಾಡಿದ್ದಾರೆ.

Srinivasa Murthy VN
Updated On : 7 Oct 2013, 5:41 am

ಸೂರತ್: ವಿವಾದಿತ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಪುತ್ರ ನಾರಾಯಣ ಸಾಯಿ ವಿರುದ್ಧ ಸೂರತ್ ಪೊಲೀಸರು ಲುಕ್‌ಔಟ್ ನೋಟಿಸ್ ಜಾರಿ ಮಾಡಿದ್ದಾರೆ.

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಅಸಾರಾಂ ಬಾಪು ಅವರ ಪುತ್ರ ನಾರಾಯಣ ಸಾಯಿ ತಲೆಮರೆಸಿಕೊಳ್ಳುವ ಶಂಕೆ ವ್ಯಕ್ತಪಡಿಸಿರುವ ಸೂರತ್ ಪೊಲೀಸರು ಅವರ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ನಿನ್ನೆಯಷ್ಟೇ ಇಬ್ಬರು ಸಹೋದರಿಯರು ಅಸಾರಾಂ ಬಾಪು ಮತ್ತು ಆತನ ಪುತ್ರ ನಾರಾಯಣ ಸಾಯಿ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ್ದರು.

ದೂರು ದಾಖಲಿಸಿಕೊಂಡ ಸೂರತ್ ಪೊಲೀಸರು ಅಸಾರಾಂ ಬಾಪು, ನಾರಾಯಣ ಸಾಯಿ ಮತ್ತು ಅಸಾರಾಂ ಪತ್ನಿ ಲಕ್ಷ್ಮಿ ವಿರುದ್ಧ ಲೈಂಗಿಕ ಕಿರುಕುಳ, ಅಕ್ರಮ ಬಂಧನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ನಿನ್ನೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದ ಸೂರತ್ ಪೊಲೀಸ್ ಆಯುಕ್ತ ರಾಕೇಶ್ ಆಸ್ತಾನಾ, ಅಸಾರಾಂ ಬಾಪು ಮತ್ತು ಪುತ್ರ ನಾರಾಯಣ ಸಾಯಿ ವಿರುದ್ಧ ಹೊಸದಾದ ಎರಡು ಪ್ರತ್ಯೇಕ ದೂರುಗಳು ದಾಖಲಾಗಿವೆ ಎಂದು ತಿಳಿಸಿದರು.

2002ರಿಂದ 2004ರವರೆಗೆ ಅಹಮದಾಬಾದ್‌ನ ಆಶ್ರಮದಲ್ಲಿ ಆಯುರ್ವೇದ ಔಷದಿ ತಯಾರಿಸಲು ಸಹಾಯಕರಾಗಿ ಕೆಲಸ ಮಾಡುತ್ತಿದ್ದ ವೇಳೆ ತಮ್ಮ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಇಬ್ಬರು ಸಹೋದರಿಯರು ದೂರು ನೀಡಿದ್ದರು.

ದೂರಿನಲ್ಲಿ ಅಹಮದಾಬಾದ್‌ನ ಆಶ್ರಮದಲ್ಲಿ ಹಿರಿಯ ಯುವತಿಯ ಮೇಲೆ ಅಸಾರಾಂ ಬಾಪು ಅತ್ಯಾಚಾರ ನಡೆಸಿದ್ದು, ಸೂರತ್‌ನಲ್ಲಿ ಕಿರಿಯ ಯುವತಿಯ ಮೇಲೆ ನಾರಾಯಣ್ ಸಾಯಿ ಅತ್ಯಾಚಾರ ನಡೆಸಿದ್ದರು ಎಂದು ದೂರಿದ್ದಾರೆ.

Advertisement

Advertisement

ಪೊಲೀಸರ ಪ್ರಕಾರ, ದೂರಿಗೆ ಸಂಬಂಧಿಸಿದಂತೆ ಅಸಾರಾಂ ಮತ್ತು ಆತನ ಪುತ್ರ ನಾರಾಯಣ್ ಸಾಯಿ ವಿರುದ್ಧ ಪ್ರತ್ಯೇಕ ದೂರುಗಳನ್ನು ದಾಖಲಿಸಿಕೊಳ್ಳಲಾಗಿದೆ. ಅಹಮದಾಬಾದ್‌ನ ಆಶ್ರಮದಲ್ಲಿ ಹಿರಿಯ ಯುವತಿಯ ಮೇಲೆ ಅತ್ಯಾಚಾರ ನಡೆಸಿದ್ದು, ಇದಕ್ಕೆ ಅಸಾರಾಂ ಪತ್ನಿ ಲಕ್ಷ್ಮಿ ಮತ್ತು ಪುತ್ರಿ ಭಾರ್ತಿ ಸಹಕರಿಸಿದ್ದಾಗಿ ಯುವತಿಯರು ದೂರಿನಲ್ಲಿ ತಿಳಿಸಿದ್ದರಿಂದ ಅವರ ವಿರುದ್ಧ ಸಹ ಪ್ರಕರಣ ದಾಖಲಿಸಲಾಗಿದೆ.

ಅಹಮದಾಬಾದ್‌ನ ಆಶ್ರಮದಲ್ಲಿ ಹಿರಿಯ ಯುವತಿಯ ಮೇಲೆ ಅತ್ಯಾಚಾರ ನಡೆಸಿದ್ದರಿಂದ ಅಸಾರಾಂ ವಿರುದ್ಧದ ದೂರನ್ನು ಅಹಮದಾಬಾದ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಆಯುಕ್ತ ರಾಕೇಶ್ ಆಸ್ತಾನಾ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement