ಪೃಥ್ವಿ-2 ಕ್ಷಿಪಣಿ ಯಶಸ್ವಿ ಉಡಾವಣೆ
ಸ್ವದೇಶಿ ನಿರ್ಮಿತ ಪೃಥ್ವಿ-2 ಕ್ಷಿಪಣಿಯನ್ನು ಸೋಮವಾರ ಒಡಿಶಾದ ಚಾಂಡಿಪುರ್ನಲ್ಲಿ ಯಶಸ್ವಿಯಾಗಿ ಉಡಾಯಿಸಲಾಗಿದೆ.
ಬಾಲಸೋರ್: ಸ್ವದೇಶಿ ನಿರ್ಮಿತ ಪೃಥ್ವಿ-2 ಕ್ಷಿಪಣಿಯನ್ನು ಸೋಮವಾರ ಒಡಿಶಾದ ಚಾಂಡಿಪುರ್ನಲ್ಲಿ ಯಶಸ್ವಿಯಾಗಿ ಉಡಾಯಿಸಲಾಗಿದೆ.
ಸಂಪೂರ್ಣ ಸ್ವದೇಶಿ ನಿರ್ಮಿತ ಕ್ಷಿಪಣಿಯಾಗಿರುವ ಪೃಥ್ವಿ-2 ಕ್ಷಿಪಣಿಯನ್ನು ಇಂದು ಬೆಳಗ್ಗೆ 9: 14ರ ಸಮಯದಲ್ಲಿ ಒಡಿಶಾದ ಚಾಂಡಿಪುರದ ಹೊರವಲಯದಲ್ಲಿ ಉಡಾಯಿಸಲಾಯಿತು. 350 ಕಿಮೀ ವ್ಯಾಪ್ತಿಯ ಸಾಮರ್ಥ್ಯದ ಪೃಥ್ವಿ-2 ಕ್ಷಿಪಣಿಯನ್ನು ಕರಾವಳಿ ಭದ್ರತೆಗಾಗಿ ಸಂಶೋಧಿಸಲಾಗಿದೆ ಎಂದು ಡಿಆರ್ಡಿಒ ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಬೆಳಗ್ಗೆ ಉಡಾವಣೆಯಾದ ಈ ಕ್ಷಿಪಣಿಯು ನಿಗದಿತ ಗುರಿಯನ್ನು ನಿಗದಿಪಡಿಸಲಾದ ಸಮಯದಲ್ಲಿ ತಲುಪುವ ಮೂಲಕ ವಿಜ್ಞಾನಿಗಳ ಸಂಶೋಧನೆಗೆ ಯಶ ಸಿಕ್ಕಂತಾಗಿದೆ. ಶತ್ರು ಪಾಳಯದ ನೌಕೆಗಳನ್ನು ಕ್ಷಣಮಾತ್ರದಲ್ಲಿ ಉಡಾಯಿಸಬಲ್ಲ ಸಾಮರ್ಥ್ಯ ಪೃಥ್ವಿ-2 ಕ್ಷಿಪಣಿಗಿದೆ. ಕ್ಷಿಪಣಿ ಗುರಿ ತಲುಪಿದ್ದನ್ನು ಭಾರತೀಯ ರಾಡಾರ್ಗಳು ಪತ್ತೆ ಮಾಡಿದ್ದು, ವಿಜ್ಞಾನಿಗಳಲ್ಲಿ ಹರ್ಷ ಮೂಡಿಸಿದೆ.