ಪಾಕ್ ಭಾರತ ರಾಯಭಾರಿಯಾಗಿ ಸೈಯ್ಯದ್ ಅಬ್ಬಾಸ್ ನೇಮಕ
ಪಾಕಿಸ್ತಾನದ ನೂತನ ಭಾರತ ರಾಯಭಾರಿಯಾಗಿ ಸೈಯ್ಯದ್ ಇಬನ್ ಅಬ್ಬಾಸ್ ಅವರು ನೇಮಕಗೊಂಡಿದ್ದಾರೆ.
ಇಸ್ಲಾಮಾಬಾದ್: ಪಾಕಿಸ್ತಾನದ ನೂತನ ಭಾರತ ರಾಯಭಾರಿಯಾಗಿ ಸೈಯ್ಯದ್ ಇಬನ್ ಅಬ್ಬಾಸ್ ಅವರು ನೇಮಕಗೊಂಡಿದ್ದಾರೆ.
ಪಾಕಿಸ್ತಾನ ಸರ್ಕಾರ ತನ್ನ ಭಾರತ ಮತ್ತು ಅಮೆರಿಕ ರಾಯಭಾರಿಗಳನ್ನು ಬದಲಾವಣೆ ಮಾಡಿದ್ದು, ಪಾಕಿಸ್ತಾನದ ಭಾರತ ರಾಯಭಾರಿಯಾಗಿದ್ದ ಸಲ್ಮಾನ್ ಬಷೀರ್ ಅವರ ಸ್ಥಾನಕ್ಕೆ ಸೈಯ್ಯದ್ ಇಬನ್ ಅಬ್ಬಾಸ್ ಅವರನ್ನು ನೇಮಕಗೊಳಿಸಿ ಪಾಕಿಸ್ತಾನ ಸರ್ಕಾರ ಗುರುವಾರ ಆದೇಶ ಹೋರಡಿಸಿದೆ. ಅಂತೆಯೇ ಅಮೆರಿಕದ ರಾಯಭಾರಿಯಾಗಿ ವಿದೇಶಾಂಗ ಕಾರ್ಯದರ್ಶಿಯಾಗಿರುವ ಜಲೀಲ್ ಅಬ್ಬಾಸ್ ಜಿಲಾನಿ ಅವರನ್ನು ನೇಮಿಸಿದೆ.
ಪಾಕಿಸ್ತಾನದ ಅಮೆರಿಕ ರಾಯಭಾರಿಯಾಗಿದ್ದ ಶೆರ್ರಿ ರೆಹಮಾನ್ ಅವರು ಕಳೆದ ಮೇ11 ರಂದು ರಾಜಿನಾಮೆ ನೀಡಿದ ನಂತರ ಆ ಸ್ಥಾನ ಖಾಲಿ ಉಳಿದಿತ್ತು. ಇದೀಗ ಅವರ ಸ್ಥಾನಕ್ಕೆ ಜಲೀಲ್ ಅಬ್ಬಾಸ್ ಜಿಲಾನಿ ಅವರನ್ನು ನೇಮಿಸಿದೆ.