ಭಯೋತ್ಪಾದಕ ಚಟುವಟಿಕೆ; 42 ಅಪರಾಧಿಗಳಿಗೆ 'ಗಲ್ಲು'
ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗಿಯಾದ ಆರೋಪ ಸಾಬೀತಾದ ಹಿನ್ನಲೆಯಲ್ಲಿ 42 ಮಂದಿ ಅಪರಾಧಿಗಳಿಗೆ ಇರಾಕ್ ಕಾನೂನು ಸಚಿವಾಲಯ ಗಲ್ಲು ಶಿಕ್ಷೆ ವಿಧಿಸಿದೆ.
ಬಾಗ್ದಾದ್: ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗಿಯಾದ ಆರೋಪ ಸಾಬೀತಾದ ಹಿನ್ನಲೆಯಲ್ಲಿ 42 ಮಂದಿ ಅಪರಾಧಿಗಳಿಗೆ ಇರಾಕ್ ಕಾನೂನು ಸಚಿವಾಲಯ ಗಲ್ಲು ಶಿಕ್ಷೆ ವಿಧಿಸಿದೆ.
ಇರಾಕ್ನಲ್ಲಿ ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗಿಯಾಗಿ ನೂರಾರು ಮಂದಿಯ ಸಾವಿಗೆ ಕಾರಣರಾದ ಮಹಿಳೆ ಸೇರಿದಂತೆ 42 ಮಂದಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ ಎಂದು ಇರಾಕ್ ಕಾನೂನು ಸಚಿವ ಹಸನ್ ಅಲ್ ಶಿಮ್ಮಾರಿ ಅವರು ತಿಳಿಸಿದ್ದಾರೆ.
'ಭಯೋತ್ಪಾದನೆ ಮೂಲಕ ರಾಷ್ಟ್ರದ ಸಾರ್ವಭೌಮತ್ವಕ್ಕೆ ಧಕ್ಕೆ ತಂದ ಈ ಎಲ್ಲ ಆಪರಾಧಿಗಳಿಗೆ ಅತ್ಯಧಿಕ ಶಿಕ್ಷೆ ವಿಧಿಸುವ ಮೂಲಕ, ಭಯೋತ್ಪಾದನೆಗೆ ಆಕರ್ಷಣೆಗೊಳಗಾಗುವ ಯುವಕರಿಗೆ ಸರ್ಕಾರ ಎಚ್ಚರಿಕೆ ನೀಡಿದೆ ಎಂದು ಶಿಮ್ಮಾರಿ ಹೇಳಿದರು. ಆದರೆ ಇರಾಕ್ ಸರ್ಕಾರದ ನಿರ್ಧಾರದ ವಿರುದ್ಧ ಯೂರೋಪಿಯನ್ ಒಕ್ಕೂಟ ಮತ್ತು ಅಂತಾರಾಷ್ಟ್ರೀಯ ಮಾನವ ಹಕ್ಕು ಸಮುದಾಯ ಅಸಮಾಧಾನ ವ್ಯಕ್ತಪಡಿಸಿದ್ದು, ಇರಾಕ್ ಸರ್ಕಾರವನ್ನು ಟೀಕಿಸಿವೆ.
ಈ ಹಿಂದೆ 2003ರಲ್ಲಿ ಇರಾಕ್ನ ಅಮೆರಿಕ ರಾಯಭಾರಿಯಾಗಿದ್ದ ಪಾಲ್ ಬ್ರೆಮರ್ ಅವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ನೀಡುವುದನ್ನು ರದ್ದು ಮಾಡಿದ್ದರು. ಇದೀಗ ಮತ್ತೆ ಇರಾಕ್ ಸರ್ಕಾರ ಗಲ್ಲು ಶಿಕ್ಷೆ ವಿಧಿಸಿರುವುದ ಯೂರೋಪಿಯನ್ ಒಕ್ಕೂಟದ ಕೆಂಗಣ್ಣಿಗೆ ಗುರಿಯಾಗಿದೆ.