ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನ್ಯಾಟೋ ದಾಳಿ: ಆಫ್ಘಾನಿಸ್ತಾನದಲ್ಲಿ 42 ಉಗ್ರರ ಹತ್ಯೆ

ತಾಲಿಬಾನಿ ಉಗ್ರರ ವಿರುದ್ಧ ನ್ಯಾಟೋ ಪಡೆಗಳು ಕೈಗೊಂಡಿರುವ ಮಿಲಿಟರಿ ಕಾರ್ಯಾಚರಣೆಯಲ್ಲಿ ಸುಮಾರು 42 ತಾಲಿಬಾನಿ ಉಗ್ರರು ಹತರಾಗಿದ್ದಾರೆ.

Srinivasa Murthy VN
Updated On : 2 Sept 2013, 2:37 am

ಕಾಬುಲ್: ತಾಲಿಬಾನಿ ಉಗ್ರರ ವಿರುದ್ಧ ನ್ಯಾಟೋ ಪಡೆಗಳು ಕೈಗೊಂಡಿರುವ ಮಿಲಿಟರಿ ಕಾರ್ಯಾಚರಣೆಯಲ್ಲಿ ಸುಮಾರು 42 ತಾಲಿಬಾನಿ ಉಗ್ರರು ಹತರಾಗಿದ್ದಾರೆ.

ತಾಲಿಬಾನಿ ಉಗ್ರರ ವಿರುದ್ಧ ಭಾನುವಾರ ಬೆಳಗ್ಗೆಯಿಂದಲೇ ಕಾರ್ಯಾಚರಣೆ ಕೈಗೊಂಡಿರುವ ನ್ಯಾಟೋ ಪಡೆಗಳು ಇಲ್ಲಿಯವರೆಗೂ ಸುಮಾರು 42 ಉಗ್ರರನ್ನು ಕೊಂದುಹಾಕಿವೆ. ಅಲ್ಲದೆ ನ್ಯಾಟೋ ಪಡೆಗಳ ಈ ಕಾರ್ಯಾಚರಣೆಗೆ ಆಫ್ಘಾನಿಸ್ತಾನ ಸರ್ಕಾರ ಬೆಂಬಲ ಸೂಚಿಸಿದ್ದು, ತನ್ನ ಪೊಲೀಸ್ ಮತ್ತು ಸೈನಿಕ ಪಡೆಗಳನ್ನು ಕಾರ್ಯಾಚರಣೆಗೆ ಇಳಿಸಿದೆ. ಮುಂದಿನ ದಿನಗಳಲ್ಲಿ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗುತ್ತದೆ ಎಂದು ನ್ಯಾಟೋ ಅಧಿಕಾರಿಗಳು ಹೇಳಿದ್ದಾರೆ.

ಕಾರ್ಯಾಚರಣೆಯ ಕುರಿತು ಮಾಧ್ಯಮಗಳಿಗೆ ಮಾಹಿತಿ ಬಿಡುಗಡೆ ಮಾಡಿರುವ ಆಫ್ಘಾನಿಸ್ತಾನ ಗೃಹ ಸಚಿವಾಲಯ, ತಾಲಿಬಾನ್ ಉಗ್ರರ ವಿರುದ್ಧ ನ್ಯಾಟೋ ಮತ್ತು ಆಫ್ಘಾನಿಸ್ತಾನ ಸರ್ಕಾರ ನಡೆಸುತ್ತಿರುವ ಜಂಟಿ ಮಿಲಿಟರಿ ಕಾರ್ಯಾಚರಣೆಯಲ್ಲಿ ಈ ವರೆಗೂ ಸುಮಾರು 42 ಉಗ್ರರು ಹತರಾಗಿದ್ದು, 8 ಮಂದಿ ಉಗ್ರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಲ್ಲದೆ 11 ಕ್ಕೂ ಹೆಚ್ಚು ಶಂಕಿತ ಉಗ್ರರನ್ನು ಬಂಧಿಸಲಾಗಿದೆ. ಗಾಯಾಳು ಉಗ್ರರನ್ನು ಸೇನಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿಸಿದೆ.

ಅಲ್ಲದೆ ದಾಳಿ ವೇಳೆ ಉಗ್ರರಿಗೆ ಸೇರಿದ್ದು ಎನ್ನಲಾಗುತ್ತಿರುವ ತೈಲ ಟ್ಯಾಂಕರ್ ಮತ್ತು ಹಲವು ಸರಕು ಸಾಗಣೆ ಟ್ರಕ್‌ಗಳನ್ನು ಉಡಾಯಿಸಲಾಗಿದೆ ಎಂದು ತಿಳಿದು ಬಂದಿದೆ. ತಾಲಿಬಾನಿ ಉಗ್ರರ ವಿರುದ್ಧ ನ್ಯಾಟೋ ಪಡೆಗಳು ಹಿಂದಿನಿದಂಲೂ ಕಾರ್ಯಾಚರಣೆ ನಡೆಸುತ್ತಿದಾರು, ಪ್ರಸಕ್ತ ಕಾರ್ಯಾಚರಣೆ ಬೃಹತ್ ಪ್ರಮಾಣದ್ದು ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement