ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಯುಎಸ್ ಓಪನ್: ಬೋಪಣ್ಣ-ವ್ಯಾಸೆಲಿನ್ ಜೋಡಿ ಹೊರಕ್ಕೆ

Srinivasa Murthy VN
Updated On : 2 Sept 2013, 4:40 am

ನ್ಯೂಯಾರ್ಕ್: ಅಮೆರಿಕದಲ್ಲಿ ನಡೆಯುತ್ತಿರುವ ಯುಎಸ್ ಓಪನ್ ಡಬಲ್ಸ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ಫ್ರೆಂಚ್‌ನ ರೋಜರ್ ವ್ಯಾಸೆಲಿನ್ ಜೋಡಿ ಸೋಲನ್ನು ಅನುಭವಿಸಿದೆ.

ನ್ಯೂಯಾರ್ಕ್‌ನಲ್ಲಿ ನಡೆದ ಡಬಲ್ಸ್ ಪಂದ್ಯಾವಳಿಯಲ್ಲಿ ಬೋಪಣ್ಣ ಮತ್ತು ವ್ಯಾಸೆಲಿನ್ ಜೋಡಿ ಇಂಗ್ಲೆಂಡ್‌ನ ಕೊಲಿನ್ ಫ್ಲೆಮಿಂಗ್ ಮತ್ತು ಜೋನಾಥನ್ ಮರ್ರೆ ಜೋಡಿ ವಿರುದ್ಧ 4-6, 4-6 ನೇರ ಸೆಟ್‌ಗಳಿಂದ ಸೋಲನ್ನನುಭವಿಸಿದೆ. ಪ್ರಶಸ್ತಿ ಪಡೆಯುವ ನಿಟ್ಟಿನಲ್ಲಿ ನಿರೀಕ್ಷೆ ಹುಟ್ಟಿಸಿದ್ದ ಈ ಜೋಡಿ 3ನೇ ಹಂತದಲ್ಲಿ ಸೋಲನ್ನು ಅನುಭವಿಸುವ ಮೂಲಕ ಯುಎಸ್ ಓಪನ್ ಟೂರ್ನಿಯಿಂದಲೇ ಹೊರಬಿದ್ದಿದೆ.

ಕಣದಲ್ಲಿರುವ ಸಾನಿಯಾ-ಪೇಸ್ ಜೋಡಿ

ಬೋಪಣ್ಣ ಮತ್ತು ವ್ಯಾಸೆಲಿನ್ ಜೋಡಿ ಯುಎಸ್ ಓಪನ್ ಟೆನ್ನಿಸ್ ಟೂರ್ನಿಯಿಂದ ಹೊರಬಿದಿದ್ದರೂ ಭಾರತದ ಪ್ರಶಸ್ತಿ ಪಡೆಯುವ ಆಸೆ ಇನ್ನೂ ಜೀವಂತವಾಗಿದೆ. ಏಕೆಂದರೆ ಭಾರತದ ಪರವಾಗಿ ಸಾನಿಯಾ ಮಿರ್ಜಾ ಮತ್ತು ಲಿಯಾಂಡರ್ ಪೇಸ್ ಜೋಡಿ ಕಳೆದ ಪಂದ್ಯವನ್ನು ಗೆಲ್ಲುವ ಮೂಲಕ ಕ್ವಾರ್ಟರ್ ಫೈನಲ್ ಹಂತವನ್ನು ಪ್ರವೇಶಿಸಿದೆ. ಪುರುಷರ ಡಬಲ್ಸ್ ಪಂದ್ಯದಲ್ಲಿಯೂ ಪೇಸ್ ಮತ್ತು ಜೆಕ್ ಗಣರಾಜ್ಯದ ರಾಡೆಕ್ ಸ್ಟಾಪೆನಿಕ್ ಜೋಡಿ ಫ್ರೆಂಚ್‌ನ ಮೈಕೆಲ್ ಲಿಯೋಡರಾ ಮತ್ತು ನಿಕೋಲಸ್ ಮಹುತ್ ಜೋಡಿ ವಿರುದ್ಧ 7-5, 4-6, 6-3 ನೇರ ಸೆಟ್‌ಗಳ ಗೆಲುವು ಸಾಧಿಸಿದೆ.

ಅಂತೆಯೇ ಮಹಿಳಾ ಡಬಲ್ಸ್ ವಿಭಾಗದಲ್ಲಿ ಸಾನಿಯಾ ಮಿರ್ಜಾ ಮತ್ತು ಚೀನಾದ ಜೀಜೆಂಗ್ ಜೋಡಿ ಜರ್ಮನಿಯ ಅನ್ನಾ ಲೀನಾ ಮತ್ತು ಜೆಕ್‌ನ ಕ್ವೆಟಾ ಪೆಚೆಕ್ ಜೋಡಿ ವಿರುದ್ಧ 6-2, 6-3 ನೇರ ಸೆಟ್‌ಗಳ ಸುಲಭದ ಜಯ ಸಾಧಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆದಿದ್ದಾರೆ. ಹೀಗಾಗಿ ಯುಎಸ್ ಓಪನ್ ಟೆನ್ನಿಸ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಪಡೆಯುವ  ಭಾರತದ ಆಸೆ ಇನ್ನೂ ಜೀವಂತವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement