ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಜಿ20 ಶೃಂಗ ಸಭೆ: ರಷ್ಯಾಗೆ ಪ್ರಧಾನಿ ಸಿಂಗ್ ಆಗಮನ

8ನೇ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರು ಬುಧವಾರ ಸಂಜೆ ರಷ್ಯಾಗೆ ಆಗಮಿಸಿದ್ದಾರೆ.

Srinivasa Murthy VN
Updated On : 4 Sept 2013, 7:12 am

ಸೆಂಟ್ ಪೀಟರ್ಸ್‌ಬರ್ಗ್: 8ನೇ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರು ಬುಧವಾರ ಸಂಜೆ ರಷ್ಯಾಗೆ ಆಗಮಿಸಿದ್ದಾರೆ.

ಸೆಂಟ್‌ಪೀಟರ್ಸ್‌ಬರ್ಗ್‌ನಲ್ಲಿ ನಡೆಯಲಿರುವ 8ನೇ ಜಿ20 ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರು ಇಂದು ಸಂಜೆ ರಷ್ಯಾಗೆ ಆಗಮಿಸಿದರು. ಸಭೆಯಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ ಸಿಂಗ್, ರುಪಾಯಿ ಮೌಲ್ಯ ಕುಸಿತ ತಡೆಯುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಸಮುದಾಯದೊದಿಗೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಅಲ್ಲದೆ ಸಿರಿಯಾ ಮೇಲೆ ಯುದ್ಧ ಘೋಷಿಸಲು ತುದಿಗಾಲಲ್ಲಿ ನಿಂತಿರುವ ಅಮೆರಿಕ ನಿಲುವಿನಿಂದಾಗಿ ಭಾರತಕ್ಕಾಗುವ ಆರ್ಥಿಕ ಪರಿಣಾಮವನ್ನು ಅವರು ವಿಶ್ವ ಸಮುದಾಯದ ಮುಂದಿಡುವ ಸಾಧ್ಯತೆ ಇದೆ.

ನಾಳೆಯಿಂದ ಆರಂಭವಾಗಲಿರುವ ಜಿ20 ಶೃಂಗ ಸಭೆಯಲ್ಲಿ ಸಿರಿಯಾ ದೇಶದ ಬಿಕ್ಕಟ್ಟು ಪ್ರಮುಖವಾಗಿ ಚರ್ಚೆಗೆ ಬರುವ ಸಾಧ್ಯತೆ ಇದೆ. ಒಂದು ವೇಳೆ ಅಮೆರಿಕ ಸಿರಿಯಾ ಮೇಲೆ ಯುದ್ಧ ನಡೆಸಿದ್ದೆ ಆದರೆ ಅದರಿಂದ ಅಂತಾರಾಷ್ಟ್ರೀಯ ಸಮುದಾಯದ ಮೇಲಾಗಬಹುದಾದ ಪರಿಣಾಮಗಳ ಕುರಿತು ಅಮೆರಿಕಕ್ಕೆ ತಿಳುವಳಿಕೆ ಹೇಳುವ ಸಾಧ್ಯತೆ ಇದೆ. ಅಂತೆಯೇ ಸಿರಿಯಾದಲ್ಲಿ ಉಲ್ಬಣಿಸಿರುವ ಆಂತರಿಕ ಬಿಕ್ಕಟ್ಟು ಮತ್ತು ಅಲ್ಲಿನ ಮಾನವ ಹಕ್ಕು ಉಲ್ಲಂಘನೆ ಪ್ರಕರಣವನ್ನು ಅಂತಾರಾಷ್ಟ್ರೀಯ ಸಮುದಾಯ ಗಂಭೀರವಾಗಿ ಪರಿಗಣಿಸಿದೆ. ವಿಶ್ವಸಂಸ್ಥೆ ಕೂಡ ಸಿರಿಯಾ ನಿಲುವಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವುದು, ಸಿರಿಯಾ ಬಿಕ್ಕಟ್ಟಿನ ಸ್ವರೂಪವನ್ನು ವಿಶ್ವ ಸಮುದಾಯ ಲಘುವಾಗಿ ಪರಿಗಣಿಸದಿರುವಂತೆ ಮಾಡಿದೆ.

ಒಟ್ಟಾರೆ ನಾಳೆಯಿಂದ ಪ್ರಾರಂಭವಾಗಲಿರುವ ಜಿ20 ಶೃಂಗ ಸಭೆ ಭಾರತ ಮಟ್ಟಿಗೆ ತುಂಬಾ ಪ್ರಮುಖವಾಗಿದ್ದು, ರುಪಾಯಿ ಮೌಲ್ಯ ಕುಸಿತ ಮತ್ತು ಭಾರತದ ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಜವಾಬ್ದಾರಿಯನ್ನು ಹೆಚ್ಚಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement