ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಇಂಗ್ಲೀಷ್ ABCDಗೆ ಮೋದಿ ಹೊಸ ವ್ಯಾಖ್ಯಾನ

2014ರ ಮಹಾಕದನಕ್ಕೆ ಬಿಜೆಪಿ ಅಧಿಕೃತವಾಗಿ ಧುಮುಕಿದ್ದು, ಬಿಜೆಪಿ ಪ್ರಚಾರ ಸಮಿತಿಯ ಅಧ್ಯಕ್ಷ ನರೇಂದ್ರ ಮೋದಿ ಅವರು ಇಂಗ್ಲೀಷ್ ವರ್ಣಮಾಲೆಗೆ ಹೊಸ ಅರ್ಥ ನೀಡಿದ್ದಾರೆ.

Srinivasa Murthy VN
Updated On : 10 Sept 2013, 4:58 am

ಜೈಪುರ: 2014ರ ಮಹಾಕದನಕ್ಕೆ ಬಿಜೆಪಿ ಅಧಿಕೃತವಾಗಿ ಧುಮುಕಿದ್ದು, ಬಿಜೆಪಿ ಪ್ರಚಾರ ಸಮಿತಿಯ ಅಧ್ಯಕ್ಷ ನರೇಂದ್ರ ಮೋದಿ ಅವರು ಇಂಗ್ಲೀಷ್ ನ ABCDಗೆ ಹೊಸ ವ್ಯಾಖ್ಯಾನ ನೀಡಿದ್ದಾರೆ.

2014ರ ಲೋಕಸಭಾ ಚುನಾವಣೆಗೆ ಸಕಲ ಸಿದ್ಧತೆಯಲ್ಲಿ ತೊಡಗಿರುವ ಬಿಜೆಪಿ ಜೈಪುರದಲ್ಲಿ ಮಹಾಕದನಕ್ಕೆ ಮಂಗಳವಾರ ಅಧಿಕೃತವಾಗಿ ಚಾಲನೆ ನೀಡಿದೆ. ಬಿಜೆಪಿ ಪ್ರಚಾರ ಸಮಿತಿಯ ಅಧ್ಯಕ್ಷ ಮತ್ತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಜೈಪುರದ ಅಮೃದನ್-ಕ-ಬಾಗ್ ಮೈದಾನದಲ್ಲಿ ನಡೆಯುತ್ತಿರುವ ಬೃಹತ್ ರ್ಯಾಲಿ ಮತ್ತು ಸಮಾವೇಶದಲ್ಲಿ ನರೇಂದ್ರ ಮೋದಿ, ರಾಜನಾಥ್ ಸಿಂಗ್ ಸೇರಿದಂತೆ ರಾಜಸ್ತಾನ ಬಿಜೆಪಿ ಅಧ್ಯಕ್ಷೆ ವಸುಂಧರಾ ರಾಜೆ ಮತ್ತು ಇತರೆ ಪ್ರಮುಖ ಮುಖಂಡರು ಪಾಲ್ಗೊಂಡಿದ್ದರು. ಸಭೆಯನ್ನುದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ, ದೇಶವನ್ನು ಭ್ರಷ್ಟಾಚಾರದಿಂದ ರಕ್ಷಿಸಲು ಕಾಂಗ್ರೆಸ್ ಅನ್ನು ದೇಶದಿಂದ ತೊಲಗಿಸಬೇಕು ಎಂದು ಹೇಳಿದರು.

ಸಭೆ ಆರಂಭವಾಗುತ್ತಿದ್ದಂತೆಯೇ ಜನತೆಯನ್ನುದ್ದೇಶಿಸಿ ಮಾತನಾಡಿದ ಮೋದಿ, 'ಜಿ-20 ಶೃಂಗಸಭೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಯಾವ ವಿಚಾರಗಳನ್ನು ಪ್ರಸ್ತಾಪ ಮಾಡಿದರು ಎಂದು ನಮಗೆ ತಿಳಿದಿದೆ. ದೇಶದಲ್ಲಿ ಭ್ರಷ್ಟಾಚಾರ ಕೊನೆಯಾಗಬೇಕು ಎಂದರೆ ದೇಶದಿಂದ ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆಯಬೇಕು. ಯಾರು ಅತಿಭ್ರಷ್ಟನಾಗುತ್ತಾನೆಯೋ ಅವನು ಕಾಂಗ್ರೆಸ್‌ನಲ್ಲಿ ಅತ್ಯಂತ ಯಶಸ್ವಿ ನಾಯಕನಾಗುತ್ತಾನೆ. 1947ರ ಮೊದಲಿನ ಕಾಂಗ್ರೆಸ್‌ಗೂ 1947ರ ನಂತರದ ಕಾಂಗ್ರೆಸ್‌ಗೂ ಅಜಗಜಾಂತರ ವ್ಯತ್ಯಾಸವಿದ್ದು, ಮೊದಲು ಕಾಂಗ್ರೆಸ್‌ನಲ್ಲಿ ದೇಶಭಕ್ತಿ ಇತ್ತು. ಆದರೆ ಅಲ್ಲಿ ಈಗ ಕುಟುಂಬ ಭಕ್ತಿ ಇದೆ. ಕಾಂಗ್ರೆಸ್ಸಿಗರಿಗೆ ಕೇವಲ ಸೋನಿಯಾ ಗಾಂಧಿ ಕುಟುಂಬ ಪರವಾಗಿ ಭಕ್ತಿ ಇದೆ'.

'ಬಿಜೆಪಿಯಲ್ಲೂ ಭಕ್ತಿ ಇದೆ. ಆದರೆ ನಮಗೆ ದೇಶ ಭಕ್ತಿ ಇದೆ. ನಮ್ಮ ಕುಟುಂಬದಲ್ಲಿ 125 ಕೋಟಿ ಜನರು ಇದ್ದಾರೆ. ದೇಶ ಆಳುವ ಸಾಮರ್ಥ್ಯವಿಲ್ಲದ ಕಾಂಗ್ರೆಸ್ ದೇಶದ ಪರವಾಗಿ ಯಾವುದೇ ನಿರ್ಧಾರ ಕೈಗೊಳ್ಳಲು ಅಸಮರ್ಥವಾಗಿದೆ. ಕೇಂದ್ರದ ಯುಪಿಎ ಸರ್ಕಾರದಲ್ಲಿ ನೇತಾರರಿಲ್ಲ, ನೈತಿಕತೆ ಇಲ್ಲ, ನೀತಿ ಮತ್ತು ನಿಯತ್ತು ಇಲ್ಲವೇ ಇಲ್ಲ' ಎಂದು ಮೋದಿ ಗುಡುಗಿದರು.

ಅಂತೆಯೇ ಕಾಂಗ್ರೆಸ್ ಭ್ರಷ್ಟಾಚಾರ ಪ್ರಕರಣಗಳನ್ನು ಪ್ರಸ್ತಾಪಿಸಿದ ಮೋದಿ 'ಇಂಗ್ಲಿಷ್ ABCDಗೆ ಕಾಂಗ್ರೆಸ್ ಹೊಸ ರೂಪವನ್ನು ನೀಡಿದ್ದು, ಎ-ಎಂದರೆ ಆದರ್ಶ ಹಗರಣ, ಬಿ-ಎಂದರೆ ಬೋಫೋರ್ಸ್ ಹಗರಣ, ಸಿ-ಎಂದರೆ ಕಾಮನ್ ವೆಲ್ತ್ ಹಗರಣ, ಡಿ-ಎಂದರೆ (Damad Ka Karobara) ಕಾನೂನು ವ್ಯವಹಾರ ಎಂದು ಅವರು ಹೇಳಿದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಶತಾಯಗತಾಯ ಅತ್ಯಧಿಕ ಸ್ಥಾನಗಳನ್ನು ಪಡೆಯಬೇಕು ಎಂದು ಪಟ್ಟುಹಿಡಿದಂತಿರುವ ಬಿಜೆಪಿ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ರಾಜಸ್ತಾನದಲ್ಲಿ ಬೃಹತ್ ರ್ಯಾಲಿಯನ್ನು ಹಮ್ಮಿಕೊಂಡಿದೆ. ಈ ಮೂಲಕ ಅಧಿಕೃತವಾಗಿ ಚುನಾವಣಾ ಪ್ರಚಾರಕ್ಕೆ ಧುಮುಕಿದೆ. ಒಟ್ಟಾರೆ ಪ್ರಧಾನಿ ಪಟ್ಟದ ಮೇಲೆ ಕಣ್ಣಿಟ್ಟಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಇಂದಿನ ಬೃಹತ್ ಸಮಾವೇಶದಲ್ಲೂ ಪ್ರಧಾನಿ ಸಿಂಗ್ ವಿರುದ್ಧ 2ನೇ ಬಾರಿ ನೇರ ವಾಗ್ದಾಳಿ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement