ಮತ್ತೆ ಜಿಗಿದೆ ಸೆನ್ಸೆಕ್ಸ್: ರುಪಾಯಿ ಮೌಲ್ಯ ಏರಿಕೆ
ಮುಂಬೈ: ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ ಚೇತರಿಕೆ ಮುಂದುವರೆದಿದ್ದು, ಮಂಗಳವಾರ ಸೆನ್ಸೆಕ್ಸ್ನ ಅಂಕಗಳ ಗಳಿಕೆ 700ಕ್ಕೇರಿದೆ. ಅಂತೆಯೇ ಡಾಲರ್ ಎಂದುರು ರುಪಾಯಿ ಮೌಲ್ಯ ಕೂಡ 84 ಪೈಸೆಗಳಷ್ಟು ಏರಿಕೆಯಾಗಿದೆ.
ಟ್ರಾಯ್ ಸಲಹೆಯಂತೆ ತರಂಗಾಂತರಗಳ ಷೇರುಗಳನ್ನು ಕಡಿಮೆ ಬೆಲೆಯಿಂದ ಹರಾಜು ಪ್ರಕ್ರಿಯೆ ಆರಂಭಿಸಿದ್ದರಿಂದ ಟೆಲಿಕಾಂ ವಿಭಾಗದ ಕಳೆದ ಆಗಸ್ಟ್ ತಿಂಗಳಿನ ವಹಿವಾಟು ಸಾಕಷ್ಟು ಚೇತರಿಕೆ ಕಂಡಿತ್ತು. ಅಲ್ಲದೆ ಕಾರು ಮತ್ತು ಸ್ಕೂಟರಿನ ವಹಿವಾಟು ಕೂಡ ಸಾಕಷ್ಟು ಪ್ರಮಾಣದಲ್ಲಿ ಚೇತರಿಸಿಕೊಂಡಿರುವುದು ಭಾರತೀಯ ಷೇರುಗಳಿಗೆ ಉತ್ತಮ ಬೇಡಿಕೆ ಉಂಟುಮಾಡಿದೆ.
ಈ ನಡುವೆ ಷೇರುಮಾರುಕಟ್ಟೆ ಚೇತರಿಸಿಕೊಳ್ಳುತ್ತಿರುವ ಬೆನ್ನಲ್ಲೇ ಡಾಲರ್ ಎದುರು ರುಪಾಯಿ ಮೌಲ್ಯ ಕೂಡ ಏರಿಕೆಯಾಗುತಿದ್ದು, ಇಂದು ರುಪಾಯಿ ಮೌಲ್ಯದಲ್ಲಿ 1.14 ಪೈಸೆಗಳ ಏರಿಕೆಯಾಗಿದೆ. ಈ ಮೂಲಕ ಪ್ರತಿ ಡಾಲರ್ನ ಬೆಲೆ 64.10ಕ್ಕೆ ಕುಸಿದಿದೆ. ಸೆನ್ಸೆಕ್ಸ್ 713 ಅಂಕಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದ್ದು, ಇದೀಗ ಸೆನ್ಸೆಕ್ಸ್ ಒಟ್ಟು ಗಳಿಕೆ 19,983ಕ್ಕೇರಿದೆ. ಕಳೆದ ಮೂರು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಸೆನ್ಸೆಕ್ಸ್ 20 ಸಾವಿರ ಗಡಿಯನ್ನು ತಲುಪಿದೆ.
ಒಟ್ಟಾರೆ ಕಳೆದ 1 ತಿಂಗಳಿನಿಂದ ಪಾತಾಳಕ್ಕೆ ಕುಸಿದಿದ್ದ ರುಪಾಯಿ ಮೌಲ್ಯ ಇದೀಗ ಏರಿಕೆಯತ್ತ ಮುಖಮಾಡಿರುವುದು ಹೂಡಿಕೆದಾರರಲ್ಲಿ ಸಂತಸ ಮೂಡಿಸಿದೆ.