ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕರುಣಾ ನಿಧಿ ವಿರುದ್ಧ ಮಾನನಷ್ಟ ಮೊಕದ್ದಮೆ

Srinivasa Murthy VN
Updated On : 11 Sept 2013, 4:30 am

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾ ನಿಧಿ ವಿರುದ್ಧ ತಮಿಳುನಾಡು ಸರ್ಕಾರ ಬುಧವಾರ ಮಾನನಷ್ಟ ಮೊಕದ್ದಮೆ ದಾಖಲಿಸಿದೆ.

ಡಿಎಂಕೆ ಮುಖ್ಯಸ್ಥ ಕುರಣಾ ನಿಧಿ ವಿರುದ್ಧ ಸರ್ಕಾರಿ ಅಭಿಯೋಜಕರಾಗಿರುವ ಎಂ ಎಲ್ ಜಗನ್ ಅವರು ಇಂದು ಚೆನ್ನೈ ಸೆಷನ್ಸ್ ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಆಗಸ್ಟ್ 24ರಂದು ಖಾಸಗಿ ಸುದ್ದಿ ವಾಹಿನಿಗೆ ಕರುಣಾ ನಿಧಿ ನೀಡಿದ್ದ ಸಂದರ್ಶನದಲ್ಲಿ ಸರ್ಕಾರದ ಘನತೆಗೆ ಕುಂದು ತರುವಂತಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಜಗನ್ ಅವರು ಈ ಮೊಕದ್ದಮೆ ದಾಖಲಿಸಿದ್ದಾರೆ.

ಕರುಣಾ ನಿಧಿ ಕುಟುಂಬ ಸದಸ್ಯರ ಮಾಲೀಕತ್ವದಲ್ಲಿರುವ ದಿನಪತ್ರಿಕೆಯೊಂದಕ್ಕೆ ಸರ್ಕಾರ ನೀಡುತ್ತಿದ್ದ ಜಾಹಿರಾತು ನಿಂತುಹೋದ ಕುರಿತು ಮಾತನಾಡಿದ್ದ ಡಿಎಂಕೆ ಮುಖ್ಯಸ್ಥ ಕರುಣಾ ನಿಧಿ ಅವರು, ಮುಖ್ಯಮಂತ್ರಿಗಳು ಮುಖ್ಯ ಅತಿಥಿಯಾಗಿದ್ದ ಕಾರ್ಯಕ್ರಮದಲ್ಲಿ ಅವರದ್ದೆ ಸಚಿವನೊಬ್ಬ ನಿದ್ರೆ ಮಾಡುತ್ತಿದ್ದ ಛಾಯಾಚಿತ್ರವನ್ನು ಪ್ರಕಟಿಸಿದ್ದಕ್ಕಾಗಿ ಸರ್ಕಾರ ಪತ್ರಿಕೆಗೆ ನೀಡುತ್ತಿದ್ದ ಜಾಹಿರಾತನ್ನು ಸ್ಥಗಿತಗೊಳಿಸಿದೆ ಎಂದು ಆರೋಪಿಸಿದ್ದರು.

ಇದೇ ವಿಚಾರವನ್ನು ಮುಂದಿಟ್ಟುಕೊಂಡು ಸರ್ಕಾರಿ ಅಭಿಯೋಜಕರಾಗಿರುವ ಎಂ.ಎಲ್.ಜಗನ್ ಅವರು ಇಂದು ಕರುಣಾ ನಿಧಿ ವಿರುದ್ಧ ಮಾನನಷ್ಟ ಮೊಕದ್ದಮೆ ದೂರು ದಾಖಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement