ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

'ಆಹಾರ ಭದ್ರತೆ'ಗೆ ರಾಷ್ಟ್ರಪತಿಗಳ ಅಂಕಿತ

ಕೇಂದ್ರದ ಯುಪಿಎ ಸರ್ಕಾರದ ಉದ್ದೇಶಿತ ಆಹಾರ ಭದ್ರತಾ ಮಸೂದೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಅಂಕಿತ ಹಾಕಿದ್ದಾರೆ.

Srinivasa Murthy VN
Updated On : 12 Sept 2013, 7:59 am

ನವದೆಹಲಿ: ಕೇಂದ್ರದ ಯುಪಿಎ ಸರ್ಕಾರದ ಉದ್ದೇಶಿತ ಆಹಾರ ಭದ್ರತಾ ಮಸೂದೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಅಂಕಿತ ಹಾಕಿದ್ದಾರೆ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಆಹಾರ ಭದ್ರತಾ ಮಸೂದೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಸಹಿ ಹಾಕಿದ್ದು, ದೇಶದ ಮೂರನೇ ಒಂದು ಭಾಗದ ಜನರಿಗೆ ಆಹಾರದ ಹಕ್ಕು ನೀಡುವ ಮಸೂದೆ ಕಾನೂನಾಗಿ ಪರಿವರ್ತನೆಗೊಂಡಿದೆ.

ಆಗಸ್ಟ್ 26ರಂದು ಲೋಕಸಭೆಯ ಅನುಮೋದನೆ ಪಡೆದಿದ್ದ ಆಹಾರ ಭದ್ರತಾ ಮಸೂದೆಯು ಸೆಪ್ಟೆಂಬರ್ 3ರಂದು ರಾಜ್ಯಸಭೆಯ ಅಂಗೀಕಾರ ಪಡೆದಿತ್ತು. ಈ ಮಸೂದೆಯ ಮೂಲಕ ದೇಶದ ಬಹುತೇಕ ಅಂದರೆ ಮೂರನೇ ಒಂದು ಭಾಗದ ಜನರಿಗೆ ಆಹಾರ ಹಕ್ಕು ದೊರೆಯಲಿದ್ದು, ಈ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಕಾರದಿಂದ ಜಾರಿಗೊಳಿಸಲಾಗುತ್ತದೆ.

ಯೋಜನೆಗೆ ತಗಲುವ ಬಹುತೇಕ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದ್ದು, ಈ ಯೋಜನೆಗೆ ವಾರ್ಷಿಕ 1.25ಕೋಟಿ ಹೆಚ್ಚುವರಿ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸಬೇಕಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement