ಗದ್ದೆಯಲ್ಲಿ ಬಿಬಿಎಂಪಿ ನೌಕರರ ಶವ ಪತ್ತೆ
ಗಣೇಶ ವಿಸರ್ಜನೆ ಸಂದರ್ಭದಲ್ಲಿ ನಾಪತ್ತೆಯಾಗಿದ್ದ ಬಿಬಿಎಂಪಿ ನೌಕರರ ಶವಗಳು ಸೋರಹುಣಸೆ ಗ್ರಾಮದಲ್ಲಿ ಪತ್ತೆಯಾಗಿವೆ.
ಬೆಂಗಳೂರು: ಗಣೇಶ ವಿಸರ್ಜನೆ ಸಂದರ್ಭದಲ್ಲಿ ನಾಪತ್ತೆಯಾಗಿದ್ದ ಇಬ್ಬರು ಬಿಬಿಎಂಪಿ ನೌಕರರ ಶವಗಳು ಭಾನುವಾರ ವರ್ತೂರು ಕೆರೆಯಲ್ಲಿ ಪತ್ತೆಯಾಗಿವೆ.
ಕಳೆದ ಶುಕ್ರವಾರ ಬೆಂಗಳೂರಿನ ವರ್ತೂರು ಕೆರೆಯಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ನಾಪತ್ತೆಯಾಗಿದ್ದ ಇಬ್ಬರು ಬಿಬಿಎಂಪಿ ನೌಕರರ ಶಮ ಇಂದು ಪತ್ತೆಯಾಗಿದ್ದು, ವರ್ತೂರು ಕೆರೆಯಿಂದ 2 ಕಿಮಿ ದೂರದಲ್ಲಿರುವ ಸೋರಹುಣಸೆ ಗ್ರಾಮದ ಗದ್ದೆಯಲ್ಲಿ ಪತ್ತೆಯಾಗಿದೆ. ಮೃತಪಟ್ಟ ಇಬ್ಬರನ್ನು ಮಂಜು(32) ಮತ್ತು ಮಂಜುನಾಥ್ (30) ಎಂದು ಗುರುತಿಸಲಾಗಿದೆ. ಮೃತರು ಮೂಲತಃ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯವರೆಂದು ತಿಳಿದು ಬಂದಿದೆ.
ವಿಚಾರ ತಿಳಿಯುತ್ತಿದ್ದಂತೆಯೇ ಅತ್ತಿಬೆಲೆ ಪೊಲೀಸ್ ಠಾಣೆಯ ಪೊಲೀಸರು ದೌಡಾಯಿಸಿದ್ದು, ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಕಳೆದ ಶುಕ್ರವಾರ ಗಣೇಶ ವಿಸರ್ಜನೆಗೆಂದು ವರ್ತೂರು ಕೆರೆಯಲ್ಲಿ ನೇಮಿಸಲಾಗಿದ್ದ ಈ ಇಬ್ಬರು ನೌಕರರು ಗಣೇಶ ವಿಸರ್ಜನೆಯ ನಂತರ ನಾಪತ್ತೆಯಾಗಿದ್ದರು. ನಾಪತ್ತೆಯಾದ ನೌಕರರನ್ನು ಪತ್ತೆ ಹಚ್ಚಲು ಸತತ 2 ದಿನಗಳಿಂದ ಶೋಧ ಕಾರ್ಯ ನಡೆಸಲಾಗಿತ್ತು. ಆದರೆ ಶವಗಳು ಪತ್ತೆಯಾಗಿರಲಿಲ್ಲ. ಇಂದು ಸೋರಹುಣಸೆ ಗ್ರಾಮದ ಗದ್ದೆಯಲ್ಲಿ ಶವಗಳ ಪತ್ತೆಯಾಗಿವೆ.