ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಲಂಡನ್ ಲೈಬ್ರರಿಯಲ್ಲಿ 'ರಾಜಣ್ಣ'

ಕನ್ನಡ ಚಿತ್ರರಂಗದ ಮೇರು ನಟ ಡಾ.ರಾಜ್ ಕುಮಾರ್ ಅವರು ಇನ್ನು ಮುಂದೆ ಲಂಡನ್ ಲೈಬ್ರರಿಯಲ್ಲಿ ರಾರಾಜಿಸಲಿದ್ದಾರೆ.

Srinivasa Murthy VN
Updated On : 15 Sept 2013, 7:04 am

ನವದೆಹಲಿ: ಕನ್ನಡ ಚಿತ್ರರಂಗದ ಮೇರು ನಟ ಡಾ.ರಾಜ್ ಕುಮಾರ್ ಅವರು ಇನ್ನು ಮುಂದೆ ಲಂಡನ್ ಲೈಬ್ರರಿಯಲ್ಲಿ ರಾರಾಜಿಸಲಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಅಣ್ಣಾವ್ರು ಎಂದೇ ಪ್ರಸಿದ್ಧಿ ಪಡೆದಿರುವ ಮೇರು ನಟ ದಿ. ಡಾ. ರಾಜ್ ಕುಮಾರ್ ಅವರ ಜೀವನಾಧಾರಿತ ಕೃತಿ ಲಂಡನ್ ಲೈಬ್ರರಿಯಲ್ಲಿ ಸ್ಥಾನಪಡೆದಿದೆ. ಪತ್ರಕರ್ತ ಆರ್.ಮಂಜುನಾಥ್ ಮತ್ತು ಅವರ ಪತ್ನಿ ಸೌಮ್ಯ ಮಂಜುನಾಥ್ ಅವರು ರಾಜ್ ಕುಮಾರ್ ಕುರಿತ ಪುಸ್ತಕ 'ಡಾ.ರಾಜ್ ಕುಮಾರ್(ವ್ಯಕ್ತಿತ್ವ ಹಿಂದಿನ ವ್ಯಕ್ತಿ)(Dr Rajkumar, the person behind the personality)' ಎಂಬ ಪುಸ್ತಕದ ಇಂಗ್ಲೀಷ್ ಅವತರಿಣಿಕೆಯನ್ನು ಲಂಡನ್ ಲೈಬ್ರರಿಗೆ ಹಸ್ತಾಂತರಿಸಿದ್ದಾರೆ.

ರಾಜ್ ಕುಮಾರ್ ಅವರ ಕಿರಿಯ ಪುತ್ರ, ನಟ ಪುನೀತ್ ರಾಜ್ ಕುಮಾರ್ ಮತ್ತು ಲೇಖಕ ಪ್ರಕೃತಿ ಬನವಾಸಿ ಅವರು ಈ ಹಿಂದೆ ರಾಜ್ ಹುಟ್ಟುಹಬ್ಬದ ಪ್ರಯುಕ್ತ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದ್ದ ಅದೇ ಪುಸ್ತಕದ ಇಂಗ್ಲೀಷ್ ಅವತರಣಿಕೆಯನ್ನು ಲಂಡನ್ ಗ್ರಂಥಾಲಯಕ್ಕೆ ನೀಡಲಾಗಿದೆ.

ಪುಸ್ತಕದಲ್ಲಿ ರಾಜ್ ಕುಮಾರ್ ಅವರ ಚಿತ್ರರಂಗದ ಪಯಣ ಮತ್ತು ಅವರ ವೈಯುಕ್ತಿಕ ಜೀವನದ ಹಲವು ಪ್ರಮುಖ ಘಟನಾವಳಿಗಳನ್ನು ಚಿತ್ರಿಸಲಾಗಿದೆ. 1954ರಲ್ಲಿ ಬೇಡರ ಕಣ್ಣಪ್ಪ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಾಜಕುಮಾರ್ ಅವರು 2000ದಲ್ಲಿ ನಟಿಸಿದ ಕೊನೆಯ ಚಿತ್ರ ಶಬ್ದವೇದಿಯ ವರೆಗೂ ಸುಮಾರು 208 ಚಿತ್ರಗಳಲ್ಲಿ ನಟಿಸಿದ್ದರು.

ದಶಕಗಳ ಕಾಲ ಕನ್ನಡ ಚಿತ್ರರಂಗವನ್ನು ಸಾಮ್ರಾಟನಂತೆ ಆಳಿದ್ದ ರಾಜಕುಮಾರ್ ಅವರು ಇಂದಿಗೂ ಕನ್ನಡ ಚಿತ್ರ ಪ್ರೇಮಿಗಳ ಮನದಲ್ಲಿ ಅಮರರಾಗಿದ್ದು, ಇನ್ನು ಮುಂದೆ ಲಂಡನ್ ಓದುಗರ ಬಾಯಲ್ಲಿ ನಳನಳಿಸಲಿದ್ದಾರೆ.

ಚಿತ್ರ ಕೃಪೆ:- ಒನ್ ಇಂಡಿಯಾ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement