ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನೈಜಿರಿಯಾದಲ್ಲಿ ಮತ್ತೆ ಉಗ್ರರ ದಾಳಿ: 50 ಸಾವು

Srinivasa Murthy VN
Updated On : 29 Sept 2013, 5:49 am

ನವದೆಹಲಿ: ಇತ್ತೀಚೆಗೆ ಶಾಪಿಂಗ್ ಮಾಲ್ ಮೇಲೆ ದಾಳಿ ನಡೆಸಿ ಕ್ರೌರ್ಯ ಮೆರೆದಿದ್ದ, ಬೊಕೊ ಹರಮ್ ಉಗ್ರರು, ಭಾನುವಾರ ಮತ್ತೆ ನೈಜಿರಿಯಾದಲ್ಲಿ 50 ಜನರನ್ನು ಧಾರುಣವಾಗಿ ಕೊಂದಿದ್ದಾರೆ.

ನೈಜಿರಿಯಾದ ಬೊರ್ನೋ ರಾಜ್ಯದ ಗಡಿ ಜಿಲ್ಲೆ ಗಂಬೋರ್‌ನಲ್ಲಿ ಬೊಕೊ ಹರಮ್ ಸಂಘಟನೆಯ ಇಬ್ಬರು ಶಸ್ತ್ರ ಸಜ್ಜಿತ ಉಗ್ರರು ಕಾಲೇಜು ಆವರಣದಲ್ಲಿ ನಡೆಸಿದ ದಾಳಿಯಿಂದಾಗಿ ಕನಿಷ್ಟ ಹಲವು ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 50 ಮಂದಿ ಧಾರುಣವಾಗಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬೋಕೊ ಹರಮ್ ಸಂಘಟನೆಯ ಇಬ್ಬರು ಶಸ್ತ್ರ ಸಜ್ಜಿತ ಉಗ್ರರು, ಒಮ್ಮೆಲೆ ಕಾಲೇಜು ಆವರಣವನ್ನು ಪ್ರವೇಶಿಸಿ ಮನಸೋ ಇಚ್ಛೆ ಗುಂಡಿನ ಮಳೆಗರೆದಿದ್ದಾರೆ. ಅಲ್ಲದೆ ಹಲವು ವಿಧ್ಯಾರ್ಥಿಗಳನ್ನು ಒತ್ತೆಯಾಳುಗಳಾಗಿ ಇರಿಸಿಕೊಳ್ಳಲು ಪ್ರಯತ್ನ ನಡೆಸಿದ್ದರು ಎಂದು ತಿಳಿದು ಬಂದಿದೆ. ತಮ್ಮ ಪ್ರಯತ್ನ ವಿಫಲವಾದಾಗ ಇಡೀ ತರಗತಿಗೆ ಉಗ್ರರು ಬೆಂಕಿ ಹಚ್ಚಿ ತಮ್ಮ ಕ್ರೌರ್ಯ ಮೆರೆದಿದ್ದಾರೆ.

ದಾಳಿ ವೇಳೆ ಕಾಲೇಜಿನಲ್ಲಿ ಸುಮಾರು 1000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರು ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ಸೇನೆ ಕಾಲೇಜನ್ನು ಸುತ್ತುವರೆದಿದ್ದು, ಇಬ್ಬರು ಉಗ್ರರನ್ನು ಕೊಂದುಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ದಾಳಿ ವೇಳೆ ಹೆಚ್ಚು ವಿದ್ಯಾರ್ಥಿಗಳಿದ್ದರಿಂದ ಸಾವಿನ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಉಗ್ರರ ದಾಳಿಯನ್ನು ಖಂಡಿಸಿರುವ ಗಂಬೋರ್‌ನ ಸ್ಥಳೀಯ ಸರ್ಕಾರ, ಉಗ್ರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸೇನೆಯ ಬಳಿ ಮನವಿ ಮಾಡಿಕೊಂಡಿದೆ. ಅಲ್ಲದೆ ಉಗ್ರರ ದಾಳಿಯಿಂದಾಗಿ ನೆಲೆ ಕಳೆದುಕೊಂಡಿರುವ ಸ್ಥಳೀಯರಿಗೆ ಮತ್ತು ವಿದ್ಯಾರ್ಥಿಗಳಿಗೆ ಗಂಬೋರ್ ಸರ್ಕಾರ ಊಟ ಮತ್ತು ವಸತಿ ವ್ಯವಸ್ಥೆ ಮಾಡುವುದಾಗಿ ಹೇಳಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement