ಎನ್‌ಐಎಯಿಂದ ಮತ್ತೋರ್ವ ಭಟ್ಕಳ್ ಸಹಚರನ ಬಂಧನ
ನವದೆಹಲಿ: ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಉಗ್ರ ಯಾಸಿನ್ ಭಟ್ಕಳ್‌ನ ಮತ್ತೋರ್ವ ಸಹಚರನೊಬ್ಬನನ್ನು ರಾಷ್ಟ್ರೀಯ ಭಧ್ರತಾ ಸಂಸ್ಥೆ (ಎನ್‌ಐಎ)ಯ ಅಧಿಕಾರಿಗಳು ಬಂಧಿಸಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ಕೇರಳದ ಎರ್ನಾಕುಲಂನಲ್ಲಿ ಕಾರ್ಯಾಚರಣೆ ನಡೆಸಿದ ಎನ್‌ಐಎ ಅಧಿಕಾರಿಗಳು ಭಟ್ಕಳ್‌ನ ಸಹಚರ ಮಹಮದ್ ಮಂಜೀರ್ ಇಮಾಮ್ ಎಂಬಾತನನ್ನು ಬಂಧಿಸಿದ್ದಾರೆ. 2003ರಿಂದ ಈಚೆಗೆ ಭಾರತದಲ್ಲಿ ನಡೆದ ಎಲ್ಲ ಪ್ರಮುಖ ಬಾಂಬ್ ಸ್ಫೋಟಗಳಲ್ಲಿ ಈತನ ಕೈವಾಡ ಇತ್ತು ಎಂಬ ಅಂಶವನ್ನು ಎನ್‌ಐಎ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಬಂಧಿತ ಉಗ್ರ ಇಮಾಮ್‌ನನ್ನು ಎನ್‌ಐಎ ಅಧಿಕಾರಿಗಳು ಇಂದು ಜಿಲ್ಲಾ ನ್ಯಾಯಾಧೀಶರಾದ ಐಎಸ್ ಮೆಹ್ತಾ ಅವರ ಮುಂದೆ ಹಾಜರುಪಡಿಸಿ, 15 ದಿನಗಳ ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಇಂಡಿಯನ್ ಮುಜಾಹಿದ್ದೀನ್ ಉಗ್ರ ಯಾಸಿನ್ ಭಟ್ಕಳ್‌ನನ್ನು ವಿಚಾರಣೆ ಮಾಡುವ ಸಂದರ್ಭದಲ್ಲಿ ಆತ ತನ್ನ ಮೂವರು ಸಹಚರರ ಬಗ್ಗೆ ಬಾಯಿ ಬಿಟ್ಟಿದ್ದನು. ಆತ ನೀಡಿದ ಮಾಹಿತಿಯ ಮೇರೆಗೆ ಎನ್‌ಐಎ ಅಧಿಕಾರಿಗಳು ಇಂದು ಇಮಾಮ್‌ನನ್ನು ಬಂಧಿಸಿದ್ದಾರೆ.
ಬಂಧಿತ ಮಹಮದ್ ಮಂಜೀರ್ ಇಮಾಮ್ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಸಂಸ್ಥಾಪಕರಾದ ರಿಯಾಜ್ ಭಟ್ಕಳ್ ಮತ್ತು ತೆಹಸೀನ್ ಅಖ್ತರ್‌ನ ಆಣತಿಯಂತೆ ಕೆಲಸ ಮಾಡುತ್ತಿದ್ದನು. ಅಲ್ಲದೆ ಬಾಂಬ್ ಸ್ಫೋಟ ನಡೆಸುವ ಪ್ರದೇಶಗಳ ಸಂಪೂರ್ಣ ಮಾಹಿತಿಯನ್ನು ಇವರಿಗೆ ತಲುಪಿಸುತ್ತಿದ್ದನು ಎಂದು ಎನ್‌ಐಎ ಮೂಲಗಳು ತಿಳಿಸಿವೆ.
ಪ್ರಸ್ತುತ ಮಹಮದ್ ಮಂಜೀರ್ ಇಮಾಮ್‌ನನ್ನು ನ್ಯಾಯಾಲಯ ಅಕ್ಟೋಬರ್ 15ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.