ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಚಿಲಿಯಲ್ಲಿ ಪ್ರಬಲ ಭೂಕಂಪ, ಸುನಾಮಿ ಎಚ್ಚರಿಕೆ

ನೈರುತ್ಯ ಚಿಲಿ ದೇಶದಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, 6 ಮಂದಿ ಸಾವಿಗೀಡಾಗಿದ್ದಾರೆ.

Srinivasa Murthy VN
Updated On : 2 Apr 2014, 3:15 am

ಸ್ಯಾಂಟಿಯಾಗೋ: ನೈರುತ್ಯ ಚಿಲಿ ದೇಶದಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, 6 ಮಂದಿ ಸಾವಿಗೀಡಾಗಿದ್ದಾರೆ.

ರಿಕ್ಟರ್ ಮಾಪಕದಲ್ಲಿ 8.2 ತೀವ್ರತೆ ದಾಖಲಾಗಿದ್ದು, ಚಿಲಿಯ ಕರಾವಳಿ ತೀರ ಪ್ರದೇಶಗಳಿಗೆ ಸುನಾಮಿ ಎಚ್ಚರಿಕೆ ರವಾನಿಸಲಾಗಿದೆ. ಮಂಗಳವಾರ ರಾತ್ರಿ ನಡೆದ ಈ ಘಟನೆಯಲ್ಲಿ ಹಲವು ಬೃಹತ್ ಕಟ್ಟಡಗಳು ಜಖಂಗೊಂಡಿದ್ದು, ಕಟ್ಟಡಗಳ ಅವಶೇಷಗಳಡಿಯಲ್ಲಿ ಐದು ಮೃತದೇಹಗಳು ಪತ್ತೆಯಾಗಿವೆ. ಅಂತೆಯೇ ಚಿಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ಕೂಡ ಭೂಕಂಪನದಿಂದಾಗಿ ಹಾನಿಗೊಳಗಾಗಿದ್ದು, ಹತ್ತಾರು ವಿಮಾನಗಳ ಹಾರಟವನ್ನು ರದ್ದುಗೊಳಿಸಲಾಗಿದೆ.

ಇದೇ ವೇಳೆ ಲ್ಕಿಕ್ ನಗರದಲ್ಲಿನ ಬಂಧೀಖಾನೆಯಲ್ಲಿದ್ದ ಸುಮಾರು 30ಕ್ಕೂ ಅಧಿಕ ಮಹಿಳಾ ಖೈದಿಗಳು ಸಿಬ್ಬಂಧಿಗಳ ಕಣ್ತಪ್ಪಿಸಿ ಪರಾರಿಯಾಗಿದ್ದಾರೆ. ಪರಾರಿಯಾದ ಖೈದಿಗಳ ಬಂಧನಕ್ಕಾಗಿ ಚಿಲಿ ಸೇನಾಪಡೆ ಮತ್ತು ಪೊಲೀಸರು ಹರಸಾಹಸ ಪಡುತ್ತಿದ್ದು, ಕಾರ್ಯಾಚರಣೆಗೆ ವಿಶೇಷ ವಿಮಾನ ಬಳಸುತ್ತಿದ್ದಾರೆ. ಅರಿಕಾ ನಗರ ಭೂಕಂಪನದ ಕೇಂದ್ರಬಿಂದುವಾಗಿದ್ದು, ನಗರದ ಸುತ್ತಮುತ್ತಲಿನ ಸುಮಾರು 1396 ಕಿ.ಮೀ ವ್ಯಾಪ್ತಿಯ ಪ್ರದೇಶಗಳಲ್ಲಿ ಭೂಕಂಪನದ ಅನುಭವವಾಗಿದೆ.

ಭೂಕಂಪನದಿಂದಾಗಿ ಅರಿಕಾ ನಗರ ಮತ್ತು ಲ್ಕಿಕ್ ನಗರಗಳಲ್ಲಿ ಬಹುತೇಕ (ಶೇ.90) ವಿದ್ಯುತ್ ಸ್ಥಗಿತಕೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement