ಬಾಬ್ರಿ ವಿವಾದ ಮುಗಿದ ಅಧ್ಯಾಯ: ಯಡಿಯೂರಪ್ಪ
ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಮುಗಿದ ಅಧ್ಯಾಯವಾಗಿದ್ದು, ಅದರ ಕುಟುಕು ಕಾರ್ಯಾಚರಣೆ ಕುರಿತು..
ಶಿವಮೊಗ್ಗ: ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಮುಗಿದ ಅಧ್ಯಾಯವಾಗಿದ್ದು, ಅದರ ಕುಟುಕು ಕಾರ್ಯಾಚರಣೆ ಕುರಿತು ಯಾರೂ ತಲೆ ಕೆಡಿಸಿಕೊಂಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಯಡಿಯೂರಪ್ಪ ಅವರು ಈ ಬಗ್ಗೆ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಜನರಲ್ಲಿ ಮತ ಕೇಳಲು ವಿಚಾರಗಳೇ ಸಿಗುತಿಲ್ಲ. ಹೀಗಾಗಿ ಬಾಬ್ರಿ ಮಸೀದಿ ವಿಚಾರವನ್ನು ಹಿಡಿಕೊಂಡಿದೆ. ಬಾಬ್ರಿ ಮಸೀದಿ ಪ್ರಕರಣ ಮುಗಿದ ಅಧ್ಯಾಯವಾಗಿದ್ದು, ಕೋಬ್ರಾಪೋಸ್ಟ್ ಕುಟುಕು ಕಾರ್ಯಾಚರಣೆ ಕುರಿತು ಯಾರೂ ತಲೆ ಕೆಡಿಸಿಕೊಂಡಿಲ್ಲ. ಅಲ್ಲದೆ ಕೋಬ್ರಾ ಪೋಸ್ಟ್ ವರದಿಯಿಂದಾಗಿ ಬಿಜೆಪಿ ಪಕ್ಷಕ್ಕೆ ಯಾವುದೇ ಹಿನ್ನಡೆಯಾಗುವುದಿಲ್ಲ ಎಂದು ಯಡಿಯೂರಪ್ಪ ಹೇಳಿದರು.
ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಆಪರೇಷನ್ ಜನ್ಮಭೂಮಿ ಎಂಬ ಹೆಸರಲ್ಲಿ ಕುಟುಕು ಕಾರ್ಯಾಚರಣೆ ನಡೆಸಿದ್ದ ಕೋಬ್ರಾಪೋಸ್ಟ್, ನಿನ್ನೆ ಅದರ ವರದಿಯನ್ನು ಬಹಿರಂಗಪಡಿಸಿತ್ತು. ಅಲ್ಲದೆ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಪೂರ್ವ ನಿಯೋಜಿತ ಕೃತ್ಯ ಎಂದೂ ಮತ್ತು ಈ ವಿಚಾರ ಅಂದಿನ ಪ್ರಧಾನಿ ನರಸಿಂಹರಾವ್ ಅವರಿಗೂ ತಿಳಿದಿತ್ತು ಎಂದು ಆರೋಪಿಸಿತ್ತು.