ರಾತ್ರಿ 10ರ ನಂತರ ಮನೆ ಮನೆ ಪ್ರಚಾರ 'ಅಪರಾಧ'
ರಾತ್ರಿ 10 ಗಂಟೆಯ ನಂತರ ಚುನಾವಣಾ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಪ್ರಚಾರ ನಡೆಸುವಂತಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಚೆನ್ನೈ: ರಾತ್ರಿ 10 ಗಂಟೆಯ ನಂತರ ಚುನಾವಣಾ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಪ್ರಚಾರ ನಡೆಸುವಂತಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಚುನಾವಣಾ ಅಭ್ಯರ್ಥಿಗಳು ರಾತ್ರಿ 10 ಗಂಟೆಯ ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತಿರುವ ಕುರಿತು ಸಾಕಷ್ಟು ದೂರುಗಳು ಬರುತ್ತಿದ್ದು, ಇದು ಕಾನೂನು ಪ್ರಕಾರ ಅಪರಾಧವೆಂದು ತಮಿಳುನಾಡು ಚುನಾವಣಾ ಆಯೋಗದ ಮುಖ್ಯ ಚುನಾವಣಾ ಅಧಿಕಾರಿ ಪ್ರವೀಣ್ ಕುಮಾರ್ ಅವರು ಹೇಳಿದ್ದಾರೆ.
ಸೇಲಂನಲ್ಲಿ ಈ ಬಗ್ಗೆ ಮಾತನಾಡಿದ ಪ್ರವೀಣ್ ಕುಮಾರ್ ಅವರು, ರಾತ್ರಿ 10 ಗಂಟೆಯ ನಂತರ ಪ್ರಚಾರ ನಡೆಸುವುದಕ್ಕೆ ಚುನಾವಣಾ ಆಯೋಗ ಯಾರಿಗೂ ಅಧಿಕಾರ ನೀಡಿಲ್ಲ. ಧ್ವನಿವರ್ಧಕಗಳ ಬಳಕೆ, ರ್ಯಾಲಿ, ಸಮಾವೇಶ ಮತ್ತು ಮನೆ ಮನೆ ಪ್ರಚಾರಗಳೆಲ್ಲವನ್ನೂ ರಾತ್ರಿ 10 ಗಂಟೆಯ ಒಳಗೆ ಮುಗಿಸಬೇಕು. ಇಲ್ಲದಿದ್ದರೆ ಸಾರ್ವಜನಿಕರ ಖಾಸಗಿ ಜೀವನಕ್ಕೆ ಅಡ್ಡಿಯಾಗುತ್ತದೆ. 10 ರನಂತರವೂ ಪ್ರಚಾರ ನಡೆಸುವಂತಹ, ಪ್ರಚಾರ ನಡೆಸುವಂತೆ ಒತ್ತಾಯಿಸುವ ಅಭ್ಯರ್ಥಿ ಅಥವಾ ಅವರ ಬೆಂಬಲಿಗರ ವಿರುದ್ಧ ಐಪಿಸೆ ಸೆಕ್ಷನ್ 451ರ ಅಡಿಯಲ್ಲಿ ದೂರು ದಾಖಲಿಸಲಾಗುವುದು. ಅಲ್ಲದೆ ಅಗತ್ಯ ಬಿದ್ದರೆ ಬಂಧನ ಕೂಡ ಮಾಡಲಾಗುತ್ತದೆ ಎಂದು ಹೇಳಿದರು.