ಅಮಿತ್ ಶಾ ವಿರುದ್ಧ ಚು.ಆಯೋಗದ ಕೆಂಗಣ್ಣು
ವಿವಾದಾತ್ಮಕ ಹೇಳಿಕೆ ನೀಡಿ ಕೇಂದ್ರ ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾಗಿದ್ದ ಮಾಜಿ ಸಚಿವ...
ಲಖನೌ: ವಿವಾದಾತ್ಮಕ ಹೇಳಿಕೆ ನೀಡಿ ಕೇಂದ್ರ ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾಗಿದ್ದ ಮಾಜಿ ಸಚಿವ ಅಮಿತ್ ಶಾ ಅವರ ವಿರುದ್ಧ ದೂರು ದಾಖಲಾಗಿದೆ.
ಬಿಜ್ನೋರ್ ದಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅಮಿತ್ ಶಾ ಅವರು, ಗಲಭೆಯಲ್ಲಿ ಹಾನಿಗೊಳಗಾದ ಜಾತ್ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, ಮನುಷ್ಯ ಆಹಾರ ಮತ್ತು ನಿದ್ರೆ ಇಲ್ಲದಿದ್ದರೂ ಬದುಕ ಬಲ್ಲ. ಆದರೆ ತನಗಾದ ಅವಮಾನವನ್ನು ಸಹಿಸಿಕೊಂಡು ಆತ ಬದುಕಲಾರ. ಅವಮಾನಕ್ಕೆ ಪ್ರತೀಕಾರ ಪಡೆಯುವ ಕಾಲ ಸನ್ನಿಹಿತವಾಗಿದೆ. ರಾಜ್ಯದ ಜನತೆಗೆ ಮುಲಾಯಂ ಮತ್ತು ಅಖಿಲೇಶ್ ಸರ್ಕಾರದ ವಿರುದ್ಧ ಸೇಡುತೀರಿಸಿಕೊಳ್ಳುವಂತಿದ್ದರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ ನೀಡುವಂತೆ ಅಮಿತ್ ಶಾ ಮನವಿ ಮಾಡಿದರು.
ಅಮಿತ್ ಶಾ ಅವರ ಈ ವಿವಾದಾತ್ಮಕ ಹೇಳಿಕೆ ವಿರುದ್ಧ ಕೇಂದ್ರ ಚುನಾವಣಾ ಆಯೋಗ ದೂರು ದಾಖಲಿಸಿಕೊಂಡಿದ್ದು, ವಿಚಾರಣೆಗೆ ಮುಂದಾಗಿದೆ. ಕಾರ್ಯಕ್ರಮದ ವೇಳೆ ಅಮಿತ್ ಶಾ ಅವರ ಭಾಷಣದ ದೃಶ್ಯಾವಳಿಗಳನ್ನು ಪಡೆದಿರುವ ಆಯೋಗ ಪರಿಶೀಲನೆಯಲ್ಲಿ ತೊಡಗಿದೆ.