ಲೋಕ ಸಮರ: ಅಸ್ಸಾಂನಲ್ಲಿ ಶೇ.72.5 ರಷ್ಟು ಮತದಾನ
ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಮುಕ್ತಾಯವಾಗಿದ್ದು, 5 ಕ್ಷೇತ್ರಗಳಲ್ಲಿ ಇಂದು ಮತ ಚಲಾವಣೆ ಕಾರ್ಯ ಮುಕ್ತಾಯವಾಗಿದೆ.
ನವದೆಹಲಿ: ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಮುಕ್ತಾಯವಾಗಿದ್ದು, 5 ಕ್ಷೇತ್ರಗಳಲ್ಲಿ ಇಂದು ಮತ ಚಲಾವಣೆ ಕಾರ್ಯ ಮುಕ್ತಾಯವಾಗಿದೆ.
ಇಂದು ಬೆಳಗ್ಗಿನಿಂದಲೇ ಆರಂಭವಾದ ಮತದಾನ 10 ಗಂಟೆಯ ನಂತರ ಬಿರುಸುಗೊಂಡಿತ್ತು. ಒಟ್ಟು 5 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ನಡೆದ ಮೊದಲ ಹಂತದ ಮತದಾನ ಮುಕ್ತಾಯವಾಗಿದ್ದು, ಅಸ್ಸಾಂನಲ್ಲಿ ಸಂಜೆ ವೇಳೆಗೆ ಒಟ್ಟು ಶೇ.72.5ರಷ್ಟು ಮತದಾನವಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.
ಆಸ್ಸಾಂನಲ್ಲಿ ಸ್ಥಾಪಿಸಲಾಗಿದ್ದ ಒಟ್ಟು 8, 588 ಮತ ಕೇಂದ್ರಗಳ ಮತದಾನ ಮುಕ್ತಾಯವಾಗಿದೆ. ಮತದಾನಕ್ಕೆ ನಕ್ಸಲರ ಬೆದರಿಕೆ ಇದ್ದ ಹಿನ್ನಲೆಯಲ್ಲಿ ಎಲ್ಲ ಮತ ಕೇಂದ್ರಗಳಿಗೂ ಬಿಗಿ ಭದ್ರತೆ ಒದಗಿಸಲಾಗಿದ್ದು, ರಕ್ಷಣಾ ಪಡೆಗಳು ಮತ್ತು ಸಿಆರ್‌ಪಿಎಫ್ ತುಕಡಿಗಳನ್ನು ನಿಯೋಜಿಸಲಾಗಿತ್ತು. ಆದರೆ ಯಾವುದೇ ಅಡಚಣೆ ಇಲ್ಲದೆ ಮತದಾನ ಶಾಂತಿಯುತವಾಗಿ ಮುಕ್ತಾಯಗೊಂಡಿದೆ.
ಒಟ್ಟು 9 ಹಂತಗಳಲ್ಲಿ ಲೋಕಸಭಾ ಚುನಾವಣೆಯ ಮತದಾನ ನಡೆಯಲಿದ್ದು, ಮೇ 12 ರಂದು ವಾರಣಾಸಿ ಸೇರಿದಂತೆ ಉತ್ತರ ಪ್ರದೇಶದ ಕೆಲವು ಕ್ಷೇತ್ರಗಳಲ್ಲಿ ಕೊನೆಯ ಹಂತದ ಮತದಾನ ನಡೆಯಲಿದೆ. ಮೇ 16ರಂದು ಫಲಿತಾಂಶ ಪ್ರಕಟವಾಗಲಿದೆ.