ರಜನಿ ಭೇಟಿ ಮಾಡಿದ ಮೋದಿ
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ತಮಿಳು ಸೂಪರ್ ಸ್ಟಾರ್ ನಟ ರಜನಿಕಾಂತ್ ಅವರನ್ನು ಭಾನುವಾರ ಭೇಟಿ ಮಾಡಿದ್ದಾರೆ.
ಚೈನ್ನೈ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ತಮಿಳು ಸೂಪರ್ ಸ್ಟಾರ್ ನಟ ರಜನಿಕಾಂತ್ ಅವರನ್ನು ಭಾನುವಾರ ಭೇಟಿ ಮಾಡಿದ್ದಾರೆ.
ಈ ಹಿಂದೆ ನಿಗದಿಪಡಿಸಿದಂತೆಯೇ ಭಾನುವಾರ ಸಂಜೆ ಚೆನ್ನೈನ ಪೋಯಸ್ ಗಾರ್ಡನ್ನಲ್ಲಿರುವ ರಜನಿಕಾಂತ್ ಅವರ ನಿವಾಸಕ್ಕೆ ಆಗಮಿಸಿದ ನರೇಂದ್ರ ಮೋದಿ ಅವರು ಪರಸ್ಪರ ಚರ್ಚಿಸಿದರು. ಸುಮಾರು ಅರ್ಧಗಂಟೆಗೂ ಅಧಿಕ ಕಾಲ ರಜನಿಕಾಂತ್ ಮತ್ತು ನರೇಂದ್ರ ಮೋದಿ ಚರ್ಚಿಸಿದರು.
ಭೇಟಿ ನಂತರ ಮಾತನಾಡಿದ ರಜನಿಕಾಂತ್ ಅವರು, ಇಂದಿನ ಭೇಟಿ ಸ್ನೇಹಪೂರ್ವಕವಾಗಿದ್ದೇ ವಿನಃ ರಾಜಕೀಯ ಕುರಿತಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದರು. ಇದಕ್ಕೂ ಮೊದಲೇ ರಜನಿ ಕಾಂತ್ ಅವರು ತಮ್ಮ ಭೇಟಿಗೆ ರಾಜಕೀಯ ಬಣ್ಣ ಬರಬಾರದು ಎಂದು ಷರತ್ತು ವಿಧಿಸಿದ್ದರು. ಹೀಗಾಗಿಯ ಭೇಟಿ ವೇಳೆ ನರೇಂದ್ರ ಮೋದಿ ಅವರನ್ನು ಹೊರತುಪಡಿಸಿ ಬಿಜೆಪಿ ಯಾವುದೇ ಮುಖಂಡರೊಂದಿಗೆ ರಜನಿ ಚರ್ಚೆ ನಡೆಸಲಿಲ್ಲ.
ಅಲ್ಲದೆ ಎಲ್ಲ ಮುಖಂಡರು ರಜನಿಕಾಂತ್ ಅವರ ನಿವಾಸದ ಆವರಣದಲ್ಲಿಯೇ ಕಾದುಕುಳಿತಿದ್ದರು. ಭೇಟಿ ವೇಳೆ ರಜನಿಕಾಂತ್ ಮತ್ತು ನರೇಂದ್ರ ಮೋದಿ ಅವರು ಮಾತ್ರವೇ ಪ್ರತ್ಯೇಕ ಕೊಠಡಿಯಲ್ಲಿ ಚರ್ಚೆ ನಡೆಸಿದರು. ಇದೇ ವೇಳೆ ತಮಿಳು ಸಂಸ್ಕೃತಿಯ ಪ್ರಕಾರ ನಾಳೆ ಹೊಸವರ್ಷವಾಗಿದ್ದು, ಮೋದಿ ರಜನಿಕಾಂತ್ ಅವರಿಗೆ ಹೊಸ ವರ್ಷದ ಶುಭಾಷಯ ಕೋರಿದರು.