ಬಟ್ಟೆ ಕದ್ದ ಕಾರ್ಪೋರೇಟರ್ ಅರೆಸ್ಟ್
ಬೆಂಗಳೂರಿನ ಗಿರಿನಗರದ ಕಾರ್ಪೋರೇಟರ್ ಹೆಚ್.ಎಸ್.ಲಲಿತಾ ಎಂಬುವವರನ್ನು ಬಟ್ಟೆ ಕದ್ದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ಬೆಂಗಳೂರಿನ ಗಿರಿನಗರದ ಕಾರ್ಪೋರೇಟರ್ ಹೆಚ್.ಎಸ್.ಲಲಿತಾ ಎಂಬುವವರನ್ನು ಬಟ್ಟೆ ಕದ್ದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.
ಗಾಂಧಿನಗರದ ಸುಖ್ ಸಾಗರ್ ಮಾಲ್ನಲ್ಲಿರುವ ಬಟ್ಟೆ ಮಳಿಗೆಗೆ ಆಗಮಿಸಿದ್ದ ಕಾರ್ಪೋರೇಟರ್ ಲಲಿತಾ ಅವರು ಬಟ್ಟೆ ಕದಿದ್ದು, ಅವರನ್ನು ಉಪ್ಪಾರ ಪೇಟೆ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಲಲಿತಾ ಅವರ ಬಳಿ ಇದ್ದ ಒಟ್ಟು 8 ಟಾಪ್ಗಳ ಪೈಕಿ 2ಕ್ಕೆ ಮಾತ್ರ ಹಣ ಪಾವತಿ ಮಾಡಿದ್ದು, ಉಳಿದ 6 ಟಾಪ್ಗಳನ್ನು ಕದ್ದು ತೆಗೆದೊಯ್ಯಲು ಯತ್ನಿಸುತ್ತಿದ್ದರು. ಈ ವೇಳೆ ಅನುಮಾನಗೊಂಡ ಅಂಗಡಿಯವನು ಅವರನ್ನು ಪರೀಕ್ಷಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಹಿಂದೆ ಕೂಡ ಲಲಿತಾ ಅವರು ತಮ್ಮ ಅಂಗಡಿಗೆ ಬಂದಾಗ ಸಾಕಷ್ಟು ಬಟ್ಟೆಗಳು ಕಾಣೆಯಾಗಿದ್ದವು ಎಂದು ಅಂಗಡಿ ಮಾಲೀಕ ಆರೋಪಿಸಿದ್ದಾನೆ.
ಹೆಚ್.ಎಸ್.ಲಲಿತಾ ಅವರು ಬೆಂಗಳೂರಿನ ಗಿರಿನಗರದ ವಾರ್ಡ್ ನಂಬರ್ 162ರ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯರಾಗಿದ್ದಾರೆ.