ಎ.ಕೃಷ್ಣಪ್ಪ ಪಂಚಭೂತಗಳಲ್ಲಿ ಲೀನ
ಬುಧವಾರ ನಿಧನರಾಗಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಮತ್ತು ಮಾಜಿ ಸಚಿವ ಎ.ಕೃಷ್ಣಪ್ಪ ಅವರ ಅಂತ್ಯಕ್ರಿಯೆ ಪೂರ್ಣಗೊಂಡಿದೆ.
ಬೆಂಗಳೂರು: ಬುಧವಾರ ನಿಧನರಾಗಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಮತ್ತು ಮಾಜಿ ಸಚಿವ ಎ.ಕೃಷ್ಣಪ್ಪ ಅವರ ಅಂತ್ಯಕ್ರಿಯೆ ಪೂರ್ಣಗೊಂಡಿದೆ.
ನಿನ್ನೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎ.ಕೃಷ್ಣಪ್ಪ ಅವರ ಅಂತ್ಯಕ್ರಿಯೆ ನೆರವೇರಿದ್ದು, ಅವರ ಮೊಮ್ಮಗ ಬ್ರಿಜೇಷ್ ಯಾದವ್ ಅವರು ಕೃಷ್ಣಪ್ಪ ಅವರ ಅಂತಿಮ ವಿಧಿವಿಧಾನವನ್ನು ನೆರವೇರಿಸಿದ್ದಾರೆ.
ಬೆಂಗಳೂರಿನ ಕೆ.ಆರ್.ಪುರಂ ನಲ್ಲಿರುವ ಸೌತ್ ಈಸ್ಟ್ ಏಷ್ಯನ್ ಕಾಲೇಜು ಮೈದಾನದಲ್ಲಿ ಕೃಷ್ಣಪ್ಪ ಅವರ ಅಂತ್ಯಕ್ರಿಯೆ ನಡೆಸಲಾಯಿತು. ಚಿತ್ರದುರ್ಗದ ಯಾದವ ಸಂಸ್ಥಾನದ ಸ್ವಾಮೀಜಿ ಕೃಷ್ಣ ಯಾದವಾನಂದ ಸ್ವಾಮೀಜಿ ಅವರು ಅಂತಿಮ ಕ್ರಿಯಾ ವಿಧಾನವನ್ನು ನೇರವೇರಿಸಿಕೊಟ್ಟರು. ಅಂತ್ಯಕ್ರಿಯೆ ವೇಳೆ ಕೃಷ್ಣಪ್ಪ ಅವರ ಮಗಳಾದ ಬಿಬಿಎಂಪಿ ಸದಸ್ಯೆ ಪೂರ್ಣಿಮಾ, ಜೆಡಿಎಸ್ ರಾಷ್ಟ್ರಾದ್ಯಕ್ಷ ಹೆಚ್.ಡಿ.ದೇವೇಗೌಡ ಮತ್ತು ಪತ್ನಿ ಚೆನ್ನಮ್ಮ, ಹೆಚ್.ಡಿ.ರೇವಣ್ಣ ಸೇರಿದಂತೆ ಹಲವು ರಾಜಕೀಯ ಗಣ್ಯರು ಉಪಸ್ಥಿತರಿದ್ದರು.