ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮತ್ತೋರ್ವ ಕಾಮಿ ಸ್ವಾಮಿಯ ಬಂಧನ

ಅತ್ಯಾಚಾರ ಆರೋಪದ ಮೇಲೆ ಯಶವಂತಪುರ ಪೊಲೀಸರು ಅಚಲಾಶ್ರಮದ ರಮಾನಂದ ಸ್ವಾಮೀಜಿಯನ್ನು ಭಾನುವಾರ ಬಂಧಿಸಿದ್ದಾರೆ.

Srinivasa Murthy VN
Updated On : 27 Apr 2014, 3:04 am

ಬೆಂಗಳೂರು: ಅತ್ಯಾಚಾರ ಆರೋಪದ ಮೇಲೆ ಯಶವಂತಪುರ ಪೊಲೀಸರು ಅಚಲಾಶ್ರಮದ ರಮಾನಂದ ಸ್ವಾಮೀಜಿಯನ್ನು ಭಾನುವಾರ ಬಂಧಿಸಿದ್ದಾರೆ.

ತಮ್ಮ ಬಳಿ ಪೂಜೆ ಮಾಡಿಸಲು ಬಂದಿದ್ದ ಮಹಿಳೆಯನ್ನೇ ರಮಾನಂದ ಸ್ವಾಮೀಜಿ ತನ್ನ ಲೈಂಗಿಕ ತೃಷೆಗಾಗಿ ಬಳಸಿಕೊಂಡಿದ್ದು, ಮಹಿಳೆಯ ಗಂಡ ಸ್ವಾಮೀಜಿಯ ವಿರುದ್ಧ ಪೊಲೀಸರಲ್ಲಿ ದೂರು ದಾಖಲಿಸಿದ್ದಾನೆ. ದೂರಿನ ಆಧಾರದ ಮೇಲೆ ರಮಾನಂದ ಸ್ವಾಮೀಜಿಯನ್ನು ಯಶವಂತಪುರ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಶ್ರೀನಿವಾಸ್ ನಾಯ್ಡು ಎಂಬುವವರು ರಮಾನಂದ ಸ್ವಾಮೀಜಿ ವಿರುದ್ಧ ದೂರು ದಾಖಲಿಸಿದ್ದು, ಈ ಬಗ್ಗೆ ಸ್ವಾಮೀಜಿಯವರಲ್ಲಿ ವಿಚಾರಿಸಿದಾಗ ಅವರು ನನ್ನನ್ನು ಮನಸೋ ಇಚ್ಛೆ ತಳಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. 'ತಮಗೆ ಮದುವೆಯಾಗಿ 10 ವರ್ಷಗಳಾಗಿದ್ದು, ವೈದ್ಯರು ನನಗೆ ಮಕ್ಕಳಾಗುವುದಿಲ್ಲ ಎಂದು ತಿಳಿಸಿದ್ದರು. ಈ ವಿಚಾರವಾಗಿ ನನ್ನ ಪತ್ನಿ ಸ್ವಾಮೀಜಿ ಅವರ ಬಳಿ ಬಂದು ಪರಿಹಾರ ಕೇಳಿದಾಗ
ಸ್ವಾಮೀಜಿ ವಿಶೇಷ ಪೂಜೆ ಮಾಡುವುದಾಗಿ ಹೇಳಿದ್ದಾರೆ. ಅಲ್ಲದೆ ಪೂಜೆಯ ನೆಪದಲ್ಲಿ ಆಕೆಯನ್ನು ಬಲವಂತವಾಗಿ ತಮ್ಮ ಲೈಂಗಿಕ ತೃಷೆಗೆ ಬಳಿಸಿಕೊಂಡು, ಆಕೆಗೆ ಗರ್ಭಪಾತ ಕೂಡ ಮಾಡಿಸಿದ್ದಾರೆ ಎಂದು ಶ್ರೀನಿವಾಸ್ ನಾಯ್ಡು ಆರೋಪಿಸಿದ್ದಾರೆ.

ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ರಮಾನಂದ ಸ್ವಾಮೀಜಿಗೆ ಸೇರಿದ ಅಚಲಾಶ್ರಮವಿದ್ದು, ಅಲ್ಲಿಂದಲೇ ಅವರನ್ನು ಯಶವಂತಪುರ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ನಿನ್ನೆಯಷ್ಟೇ ಟಿವಿ ವಾಹಿನಿಗಳಲ್ಲಿ ಪಂಚಾಂಗ ಭೋದನೆ ಮಾಡುತ್ತಿದ್ದ ದೇವಿ ಶ್ರೀ ಸ್ವಾಮೀಜಿಯ ರಾಸಲೀಲೆಗಳು ಬಯಲಾಗಿದ್ದವು. ಈ ಪ್ರಕರಣ ಇನ್ನು ಹಚ್ಚಹಸಿರಾಗಿರುವಾಗಲೇ ಮತ್ತೋರ್ವ ಕಾಮಿ ಸ್ವಾಮಿಯ ಬಣ್ಣ ಬಯಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement