ಐಸಿಸಿ ಟೆಸ್ಟ್ ರ್ಯಾಂಕಿಂಗ್: 5ನೇ ಸ್ಥಾನಕ್ಕೆ ಕುಸಿದ ಭಾರತ
ಐಸಿಸಿಯ ನೂತನ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಭಾರತ ತಂಡ 5ನೇ ಸ್ಥಾನಕ್ಕೆ ಕುಸಿದಿದೆ.
ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಐಸಿಸಿಯ ನೂತನ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಭಾರತ ತಂಡ 5ನೇ ಸ್ಥಾನಕ್ಕೆ ಕುಸಿದಿದೆ. ಅಂತೆಯೇ ಸತತ 6 ವರ್ಷಗಳ ನಂತರ ಆಸ್ಟ್ರೇಲಿಯಾ ತಂಡ ಅಗ್ರ ಸ್ಥಾನಕ್ಕೇರಿದೆ.
ಟಿ-20 ವಿಶ್ವಕಪ್ ಅನ್ನು ಹೊರತು ಪಡಿಸಿದರೆ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ಸರಣಿಗಳಲ್ಲಿ ಕೆಟ್ಟ ಪ್ರದರ್ಶನ ತೋರಿದ್ದ ಭಾರತ ತಂಡ ನಿರೀಕ್ಷೆಯಂತೆಯೇ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ಕುಸಿತ ಅನುಭವಿಸಿದೆ. ಈ ಹಿಂದೆ 3ನೇ ಸ್ಥಾನದಲ್ಲಿದ್ದ ಭಾರತ ತಂಡ 10 ಅಂಕಗನ್ನು ಕಳೆದುಕೊಂಡು 5ನೇ ಸ್ಥಾನಕ್ಕೆ ಕುಸಿದಿದೆ. ಅಂತೆಯೇ ಇತ್ತೀಚೆಗಿನ ಆಶಸ್ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಆಸ್ಟ್ರೇಲಿಯಾ ತಂಡ ಸತತ ಆರು ವರ್ಷಗಳ ನಂತರ ಮತ್ತೆ ಅಗ್ರ ಸ್ಥಾನವನ್ನು ಅಲಂಕರಿಸಿದೆ.
ಆಸ್ಟ್ರೇಲಿಯಾದಂತೆಯೇ 123 ಅಂಕಗಳನ್ನು ಗಳಿಸಿರುವ ದಕ್ಷಿಣ ಆಫ್ರಿಕಾ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಆಸ್ಟ್ರೇಲಿಯಾಗಿಂತ ಕಡಿಮೆ ಪಾಯಿಂಟ್ಸ್ ಹೊಂದಿರುವುದರಿಂದ 2ನೇ ಸ್ಥಾನದಲ್ಲಿಯೇ ಮುಂದುವರೆದಿದೆ.
ಇನ್ನು ಏಕದಿನ ಕ್ರಿಕೆಟ್ ರ್ಯಾಂಕಿಂಗ್‌ನಲ್ಲಿ ಭಾರತ ತಂಡ ಸ್ಥಿರತೆ ಕಾಯ್ದುಕೊಂಡಿದ್ದು, 2ನೇ ಸ್ಥಾನದಲ್ಲಿಯೇ ಮುಂದುವರೆದಿದೆ. ಆದರೆ 1 ಅಂಕಗಳನ್ನು ಮಾತ್ರ ಕಳೆದುಕೊಂಡಿದೆ. ಈ ಹಿಂದೆ 113 ಅಂಕಗಳನ್ನು ಗಳಿಸಿದ್ದ ಭಾರತ, ಇದೀಗ 1 ಅಂಕವನ್ನು ಕಳೆದುಕೊಂಡಿರುವ ಹೊರತಾಗಿಯೂ 2ನೇ ಸ್ಥಾನದಲ್ಲಿ ಮುಂದುವರೆದಿದೆ. ಆಸ್ಟ್ರೇಲಿಯಾ ತಂಡ ಮೊದಲ ಸ್ಥಾನದಲ್ಲಿ ಮುಂದುವರೆದಿದೆ.
ಆದರೆ ಟಿ-20 ಕ್ರಿಕೆಟ್ ಮಾದರಿಯಲ್ಲಿ ಭಾರತ ಮೊದಲ ಸ್ಥಾನಕ್ಕೇರಿದ್ದು, ವಿಶ್ವಕಪ್ ಗೆದ್ದ ಹೊರತಾಗಿಯೂ ಶ್ರೀಲಂಕಾ ತಂಡ 2 ನೇ ಸ್ಥಾನಗಳಿಸಿದೆ. 131 ಅಂಕಗಳೊಂದಿಗೆ ಭಾರತ ತಂಡ ಮೊದಲ ಸ್ಥಾನದಲ್ಲಿದ್ದರೆ, 130 ಅಂಕಗಳನ್ನು ಗಳಿಸಿರುವ ಶ್ರೀಲಂಕಾ ತಂಡ 2ನೇ ಸ್ಥಾನದಲ್ಲಿದೆ.
ಐಸಿಸಿ ಇಂದು ಬಿಡುಗಡೆ ಮಾಡಿರುವ ನೂತನ ರ್ಯಾಂಕಿಂಗ್ ಪಟ್ಟಿ ಇಂತಿದೆ
ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ರ್ಯಾಂಕಿಂಗ್
ತಂಡ ರೇಟಿಂಗ್ಸ್
ಆಸ್ಟ್ರೇಲಿಯಾ 123
ದಕ್ಷಿಣ ಆಫ್ರಿಕಾ 123
ಇಂಗ್ಲೆಂಡ್ 104
ಪಾಕಿಸ್ತಾನ 103
ಭಾರತ 102
ನ್ಯೂಜಿಲೆಂಡ್ 92
ಶ್ರೀಲಂಕಾ 90
ವೆಸ್ಟ್ ಇಂಡೀಸ್ 76
ಜಿಂಬಾಂಬ್ವೆ 40
ಬಾಂಗ್ಲಾದೇಶ 21
--
ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ರ್ಯಾಂಕಿಂಗ್
ತಂಡ ರೇಟಿಂಗ್ಸ್
ಆಸ್ಟ್ರೇಲಿಯಾ 115
ಭಾರತ 112
ಶ್ರೀಲಂಕಾ 111
ಇಂಗ್ಲೆಂಡ್ 110
ದಕ್ಷಿಣ ಆಫ್ರಿಕಾ 109
ಪಾಕಿಸ್ತಾನ 100
ನ್ಯೂಜಿಲೆಂಡ್ 98
ವೆಸ್ಟ್ ಇಂಡೀಸ್ 94
ಬಾಂಗ್ಲಾದೇಶ 73
ಜಿಂಬಾಂಬ್ವೆ 61
ಐರ್ಲೆಂಡ್ 34
ಆಫ್ಘಾನಿಸ್ತಾನ 34
--
ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್ ರ್ಯಾಂಕಿಂಗ್
ತಂಡ ರೇಟಿಂಗ್ಸ್
ಭಾರತ 131
ಶ್ರೀಲಂಕಾ 130
ಪಾಕಿಸ್ತಾನ 123
ದಕ್ಷಿಣ ಆಫ್ರಿಕಾ 121
ಆಸ್ಟ್ರೇಲಿಯಾ 112
ನ್ಯೂಜಿಲೆಂಡ್ 110
ವೆಸ್ಟ್ ಇಂಡೀಸ್ 110
ಇಂಗ್ಲೆಂಡ್ 97
ಐರ್ಲೆಂಡ್ 87
ಬಾಂಗ್ಲಾದೇಶ 72
ನೆದರ್‌ಲ್ಯಾಂಡ್ 68
ಆಫ್ಘಾನಿಸ್ತಾನ 62
ಜಿಂಬಾಂಬ್ವೆ 52
ಸ್ಕಾಟ್‌ಲೆಂಡ್ 51