ರಾಜೀವ್ ಗಾಂಧಿಯೇ ನನ್ನ ತಂದೆ: ಪ್ರಿಯಾಂಕ
ಬಿಜೆಪಿ ಪ್ರಧಾನಿ ಅಭ್ಯಥಿ ನರೇಂದ್ರ ಮೋದಿ ಅವರಿಗೆ ಟಾಂಗ್ ನೀಡಿರುವ ಪ್ರಿಯಾಂಕಾ ಗಾಂಧಿ ಅವರು ರಾಜೀವ್ ಗಾಂಧಿಯೇ ನನ್ನ ತಂದೆ ಎಂದು ಹೇಳಿದ್ದಾರೆ.
ರಾಯ್ಬರೇಲಿ: ಬಿಜೆಪಿ ಪ್ರಧಾನಿ ಅಭ್ಯಥಿ ನರೇಂದ್ರ ಮೋದಿ ಅವರಿಗೆ ಟಾಂಗ್ ನೀಡಿರುವ ಪ್ರಿಯಾಂಕಾ ಗಾಂಧಿ ಅವರು ರಾಜೀವ್ ಗಾಂಧಿಯೇ ನನ್ನ ತಂದೆ ಎಂದು ಹೇಳಿದ್ದಾರೆ.
ರಾಯ್ಬರೇಲಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಪರ ಪ್ರಚಾರ ನಡೆಸುತ್ತಿರುವ ಪ್ರಿಯಾಂಕಾ ಗಾಂಧಿ ಅವರು, ರಾಜೀವ್ ಗಾಂಧಿ ಅವರೇ ನನ್ನ ತಂದೆ ಎಂದು ಹೇಳಿದ್ದಾರೆ. ಆ ಮೂಲಕ ನರೇಂದ್ರ ಮೋದಿ ಅವರಿಗೆ ಪ್ರಿಯಾಂಕಾ ಟಾಂಗ್ ನೀಡಿದ್ದಾರೆ.
ಭದ್ರತಾ ಸಿಬ್ಬಂದಿಗಳ ಕಣ್ತಪ್ಪಿಸಿದ್ದ ಪ್ರಿಯಾಂಕಾ
ಇದೇ ವೇಳೆ ತಮ್ಮ ಭದ್ರತಾ ಸಿಬ್ಬಂಧಿಗಳ ಕಣ್ತಪ್ಪಿಸಿದ್ದ ಪ್ರಿಯಾಂಕಾ ಗಾಂಧಿ ಅವರು ಸುಮಾರು 20 ನಿಮಿಷಗಳ ಕಾಲ ಏಕಾಂಗಿಯಾಗಿ ಸುತ್ತಾಡಿದ್ದಾರೆ. ಇತ್ತ ಪ್ರಿಯಾಂಕಗಾಗಿ ಹುಡುಕಾಟ ನಡೆಸಿದ್ದ ಭದ್ರತಾ ಸಿಬ್ಬಂದಿ ಹೈರಾಣಾಗಿದ್ದಾರೆ. ಕೊನೆಗೆ ಪ್ರಿಯಾಂಕಾರನ್ನು ಹುಡುಕಿದ ಸಿಬ್ಬಂದಿ ಅವರನ್ನು ಸುರಕ್ಷಿತವಾಗಿ ವಾಪಸ್ ಕರೆದೊಯ್ದಿದ್ದಾರೆ.