ಬಾಗಲಕೋಟೆ: ಬಾದಾಮಿ ತಾಲೂಕಿನ ಸೂಳಿಕೇರಿಯಲ್ಲಿ ತೆರೆದ ಕೊಳವೆ ಬಾವಿಗೆ ಬಾಲಕ ತಿಮ್ಮಣ್ಣ ಬಿದ್ದು 6 ದಿನಗಳು ಕಳೆದರು ಕಾರ್ಯಾಚರಣೆ ಇನ್ನೂ ಯಶಸ್ವಿಯಾಗಿಲ್ಲ.
ಇದರಿಂದ ಮಗ ಬದುಕಿರುವ ಭರವಸೆ ಕಳೆದುಕೊಂಡಿರುವ ತಿಮ್ಮಣ್ಣನ ತಂದೆ ಕಾರ್ಯಾಚರಣೆಯನ್ನು ನಿಲ್ಲಿಸಿ ತನ್ನ ಹೊಲವನ್ನು ಉಳಿಸಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ.
ರೋಬೋಟ್ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದು, ಪರ್ಯಾಯ ಬಾವಿ ಕಾರ್ಯಾಚರಣೆ ಮುಂದುವರೆದಿದೆ. ಆದರೆ ಈ ಕಾರ್ಯಾಚರಣೆಯನ್ನು ಸಮಾಪ್ತಿ ಮಾಡಿ ಎಂದು ಕಳೆದ ಮೂರು ದಿನಗಳಿಂದ ಒತ್ತಾಯಿಸುತ್ತಿರುವ ತಿಮ್ಮಣ್ಣನ ತಂದೆ "ಮಗನನ್ನಂತೂ ಕಳೆದುಕೊಂಡೆ. ಈಗ ಹೊಸ ಜೀವನವನ್ನು ಪ್ರಾರಂಭಿಸಬೇಕಿದೆ. ದಯವಿಟ್ಟು ಕಾರ್ಯಾಚರಣೆ ನಿಲ್ಲಿಸಿ ನನ್ನ ಹೊಲವನ್ನು ಉಳಿಸಿಕೊಡಿ" ಎಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಸುರಂಗ ಮಾರ್ಗ ಕೊರೆಯುವ ಕಾರ್ಯಾಚರಣೆ ಮುಂದುವರೆದಿದ್ದು, ಅದನ್ನು ನಿಲ್ಲಿಸಬೇಕೋ ಅಥವಾ ಮುಂದುವರೆಸಬೇಕೋ ಎಂಬುದರ ಕುರಿತು ಜಿಲ್ಲಾಡಳಿತ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ.