ನವದೆಹಲಿ: ಬಾಲಿವುಡ್ ನಟ ಸೈಫ್ ಅಲಿಖಾನ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿರುವ ಹಿನ್ನಲೆಯಲ್ಲಿ ಸೈಫ್‌ಗೆ ನೀಡಲಾಗಿದ್ದ ಪದ್ಮಶ್ರೀ ಪ್ರಶಸ್ತಿಯನ್ನು ಹಿಂಪಡೆಯಲು ಕೇಂದ್ರ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಮುಂಬೈನ ರೆಸ್ಟೋರೆಂಟ್‌ವೊಂದರಲ್ಲಿ ಗಲಾಟೆ, ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಹೈಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಈ ಹಿನ್ನಲೆಯಲ್ಲಿ ಸೈಫ್‌ಗೆ ನೀಡಲಾಗಿರುವ ಪದ್ಮಶ್ರೀ ಪ್ರಶಸ್ತಿ ಬಗ್ಗೆ ಕೇಂದ್ರ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.
ಆರ್‌ಟಿಒ ಕಾರ್ಯಕರ್ತ ಎಸ್.ಸಿ ಅಗರ್ವಾಲ್ ಅವರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪ್ರತಿಷ್ಠಿತ ನಟ ಸೈಫ್ ಅಲಿಖಾನ್ ಅವರು ಹೋಟೆಲ್‌ವೊಂದರಲ್ಲಿ ಅನುರ್ಚಿತವಾಗಿ ವರ್ತಿಸಿದ್ದಾರೆ. ಆದ್ದರಿಂದ ಅವರಿಗೆ ನೀಡಿರುವ ಪದ್ಮಶ್ರೀ ಪ್ರಶಸ್ತಿ ಹಿಂಪಡೆಯಿರಿ ಎಂದು ಕೇಂದ್ರ ಗೃಹ ಸಚಿವಾಲಯಕ್ಕೆ ಮಾರ್ಚ್ 14ರಂದು ಅರ್ಜಿ ಸಲ್ಲಿಸಿದ್ದರು.
ಅರ್ಜಿಯನ್ನು ಪರೀಶೀಲಿಸುತ್ತಿರವ ಗೃಹ ಸಚಿವಾಲಯ ಪರೀಶೀಲನೆ ಕೈಗೊಂಡಿದ್ದು, ಪದ್ಮಶ್ರೀ ಪ್ರಶಸ್ತಿ ಹಿಂಪಡೆಯುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಸೈಫ್ ಅಲಿಖಾನ್‌ಗೆ 2010ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿತ್ತು.
ಮುಂಬೈನ ಕೊಲಾಬಾದಲ್ಲಿರುವ ತಾಜ್ ಪಂಚತಾರ ಹೋಟೆಲ್‌ನಲ್ಲಿ ಆಫ್ರಿಕದ ಉದ್ಯಮಿಯೊಬ್ಬರ ಜತೆ ಜಗಳ ಕಾಯ್ದಿದ್ದ ಸೈಫ್, ತಮ್ಮ ಮಿತ್ರರಾದ ಶಕೀಲ್ ಲಡಾಕ್ ಹಾಗೂ ಬಿಲಾಲ್ ಅಮ್ರೋಹಿ ಅವರ ಉದ್ಯಮಿಯ ಮೂಗಿಗೆ ರಕ್ತ ಬರುವಂತೆ ಸೈಫ್ ಹೊಡೆದಿದ್ದರು. ಈ ಬಗ್ಗೆ ಸೈಫ್ ವಿರುದ್ಧ ದೂರು ದಾಖಲಾಗಿತ್ತು.