ಈಗಿನ ಸುದ್ದಿ

ತಿಮ್ಮಣ್ಣನ ಮೇಲೆತ್ತುವ ಕಾರ್ಯಾಚರಣೆಗೆ ಮತ್ತೆ ಚಾಲನೆ

ಬಾಗಲಕೋಟೆ: ಕೊಳವೆ ಬಾವಿಗೆ ಬಿದ್ದ ತಿಮ್ಮಣ್ಣನನ್ನು ಮೇಲೆತ್ತುವ ಕಾರ್ಯಾಚರಣೆಗೆ ಮತ್ತೆ ಚಾಲನೆ ನೀಡಲಾಗಿದೆ.

ಕಳೆದ ಆರು ದಿನಗಳಿಂದ ನಡೆಯುತ್ತಿದ್ದ ಕಾರ್ಯಾಚರಣೆಯನ್ನು ನಿನ್ನೆ ಸ್ಥಗಿತಗೊಳಿಸಲಾಗಿತ್ತು. ಆದರೆ ಇಂದು ಅಡ್ವೋಕೇಟ್ ಜನರಲ್ ಅವರ ಸೂಚನೆ ಮೇರೆಗೆ ತಿಮ್ಮಣ್ಣನ ಮೇಲೆತ್ತುವ ಕಾರ್ಯಾಚರಣೆ ಮತ್ತೆ ಚಾಲನೆ ಸಿಕ್ಕಿದೆ. ಮುಂದೆ ಕಾನೂನು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಬಾಲಕನ ಶವ ಮೇಲಕ್ಕೆತ್ತಲು ಜಿಲ್ಲಾಡಳಿತ ಮುಂದಾಗಿದೆ.

ಯಾವುದೇ ತಂತ್ರಜ್ಞಾನವನ್ನು ಬಳಸಿ ಬಾಲಕನ ಶವವನ್ನು ಮೇಲಕ್ಕೇತ್ತಲೇಬೇಕು ಸೂಚನೆ ಮೇರೆಗೆ ಮತ್ತೆ ಕಾರ್ಯಾಚರಣೆ ಕೈಗೊಂಡಿರುವ ರಕ್ಷಣಾ ಸಿಬ್ಬಂದಿ ಬೋರ್‌ವೆಲ್‌ಗೆ ಮತ್ತೆ ಕ್ಯಾಮರ ಇಳಿಸಿ ಪರಿಶೀಲನೆ ನಡೆಸಿದ್ದಾರೆ. ಕಾರ್ಯಾಚರಣೆಗಾಗಿ ತಮಿಳುನಾಡಿನ ರೋಬೋತಜ್ಞ ಮಣಿಕಂಠನ್ ಹಾಗೂ ಮಹಾರಾಷ್ಟ್ರದ ಸಾಂಗಿಯ ಹೆಲ್ಪ್‌ಲೈನ್‌ನ ರಕ್ಷಣಾ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗಿದೆ ಎಂದು ಸಚಿವ ಎಸ್.ಆರ್. ಪಾಟೀಲ್ ಹೇಳಿದ್ದಾರೆ.

160 ಅಡಿ ಆಳದಲ್ಲಿ ಸಿಲುಕಿದ್ದ ಬಾಲಕ ತಿಮ್ಮಣ್ಣ ಈಗಾಗಲೇ ಸಾವನ್ನಪ್ಪಿದ್ದು, ಕೊಳವೆಯಿಂದ ಶವದ ವಾಸನೆ ಬರುತ್ತಿದೆ ಎಂದು ತಜ್ಞರು ಮತ್ತು ವೈದ್ಯರು ಅಭಿಪ್ರಾಯಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಢಳಿತ ಕಾರ್ಯಾಚರಣೆಯನ್ನು ನಿನ್ನೆ ಮುಕ್ತಾಯಗೊಳಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಬಹು ಅಂಗಾಂಗ ವೈಫಲ್ಯದಿಂದ ಗಾಯಕಿ ಆಶಾ ಭೋಸ್ಲೆ ನಿಧನ': ಬ್ರೀಚ್ ಕ್ಯಾಂಡಿ ಆಸ್ಪತ್ರೆ ಸ್ಪಷ್ಟನೆ

ಪ್ರತಿ ಪಂದ್ಯಕ್ಕೂ ಬನ್ನಿ... ನೀವು ನನ್ನ ಅದೃಷ್ಟ: IPLನಲ್ಲಿ ಶತಕ ಸಿಡಿಸಿ ವಿನಮ್ರ ಮನವಿ ಮಾಡಿದ ಸಂಜು ಸ್ಯಾಮ್ಸನ್, Video!

'ಇರಾನ್‌ಗೆ ಸಮವಸ್ತ್ರ, ಅಮೆರಿಕಕ್ಕೆ ಸೂಟ್': ಶಾಂತಿ ಮಾತುಕತೆಗೂ ಮುನ್ನ ಗಮನಸೆಳೆದ ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಉಡುಗೆ!

ಬೇಡ ಬೇಡ ಹೀಗೆಲ್ಲಾ ಮಾಡಬೇಡಿ: ರಸ್ತೆಯಲ್ಲೇ ಗಳಗಳನೆ ಅತ್ತ ನಟಿ ರಮ್ಯಾ

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

SCROLL FOR NEXT