ಸಿಎಂಗೆ ಕಪಾಳ ಮೋಕ್ಷ ಮಾಡಲೆತ್ನಿಸಿದ ಯುವಕ..!
ಕೆಲಸ ಸಿಗದೇ ಹತಾಶನಾಗಿದ್ದ ಯುವಕನೊಬ್ಬ ನೇರವಾಗಿ ಮುಖ್ಯಮಂತ್ರಿಗಳಿಗೇ ಕಪಾಳ ಮೋಕ್ಷ ಮಾಡಲು ಯತ್ನಿಸಿದ ಘಟನೆ ಭಾನುವಾರ ನಡೆದಿದೆ.
ಪಾಣಿಪತ್: ಕೆಲಸ ಸಿಗದೇ ಹತಾಶನಾಗಿದ್ದ ಯುವಕನೊಬ್ಬ ನೇರವಾಗಿ ಮುಖ್ಯಮಂತ್ರಿಗಳಿಗೇ ಕಪಾಳ ಮೋಕ್ಷ ಮಾಡಲು ಯತ್ನಿಸಿದ ಘಟನೆ ಭಾನುವಾರ ನಡೆದಿದೆ.
ಹರಿಯಾಣ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರಿಗೆ ಯುವಕನೊಬ್ಬ ಕಪಾಳಕ್ಕೆ ಹೊಡೆಯಲು ಯತ್ನಿಸಿದ್ದಾನೆ. ಹರಿಯಾಣ ರಾಜ್ಯದ ಪಾಣಿಪತ್ನಲ್ಲಿ ಭಾನುವಾರ ಕಾಂಗ್ರೆಸ್ ಪಕ್ಷದ ಪ್ರಚಾರ ಕಾರ್ಯಕ್ರಮದ ರ್ಯಾಲಿಯಲ್ಲಿ ಭೂಪಿಂದರ್ ಸಿಂಗ್ ಹೂಡಾ ಅವರು ಪಾಲ್ಗೊಂಡಿದ್ದ ವೇಳೆ ಈ ಘಟನೆ ನಡೆದಿದೆ. ಕೇವಲ ಕೂದಲೆಳೆಯ ಅಂತರದಲ್ಲಿ ಹೂಡಾ ಅವರು ಕಪಾಳ ಮೋಕ್ಷದಿಂದ ತಪ್ಪಿಸಿಕೊಂಡಿದ್ದು, ಹೊಡೆಯಲೆತ್ನಿಸಿದ ಯುವಕನ್ನು ಪೊಲೀಸರು ಬಂಧಿಸಿದ್ದಾರೆ.
ಸರ್ಕಾರಿ ನೌಕರಿ ಸಿಗದೇ ಹತಾಶನಾಗಿದ್ದ ಆ ಯುವಕ ಮುಖ್ಯಮಂತ್ರಿಗಳ ಬರುವಿಕೆಗಾಗಿಯೇ ಕಾದಿದ್ದು, ರ್ಯಾಲಿ ವೇಳೆ ಅವರಿಗೆ ಹೊಡೆಯಲೆತ್ನಿಸಿದ್ದಾನೆ. ಆದರೆ ಕಪಾಳ ಮೋಕ್ಷ ಮಾಡಲೆತ್ನಿಸಿದ ಆ ಯುವಕನ ಗುರುತು ಇನ್ನೂ ತಿಳಿದು ಬಂದಿಲ್ಲ.