ಆಸ್ಕರ್ ವಿಜೇತ ನಟ ಫಿಲಿಪ್ ಸೇಮೌರ್ ಸಾವು
ಹಾಲಿವುಡ್ ನಟ ಫಿಲಿಪ್ ಸೇಮೌರ್ ಅವರು ಸಾವಿಗೀಡಾಗಿದ್ದು, ನ್ಯೂಯಾರ್ಕ್‌ನ ಅಪಾರ್ಟ್‌ಮೆಂಟ್‌ನಲ್ಲಿ ಅವರ ಮೃತ ದೇಹ ಪತ್ತೆಯಾಗಿದೆ.
ನ್ಯೂಯಾರ್ಕ್: ಹಾಲಿವುಡ್ ನಟ ಫಿಲಿಪ್ ಸೇಮೌರ್ ಅವರು ಸಾವಿಗೀಡಾಗಿದ್ದು, ನ್ಯೂಯಾರ್ಕ್‌ನ ಅಪಾರ್ಟ್‌ಮೆಂಟ್‌ನಲ್ಲಿ ಅವರ ಮೃತ ದೇಹ ಪತ್ತೆಯಾಗಿದೆ.
ಫಿಲಿಪ್ ಅಮೌರ್ ಅವರ ಸಾವಿನ ಕುರಿತು ಖಾಸಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದ್ದು, ಫಿಲಿಪ್ ಸಾವು ಅನುಮಾನಾಸ್ಪದವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದೀಗ ನ್ಯೂಯಾರ್ಕ್ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಫಿಲಿಪ್ ಅವರ ಸಾವಿಗೆ ನಿಖರ ಕಾರಣ ತಿಳಿದಿಲ್ಲವಾದರೂ ವೈಧ್ಯಕೀಯ ಪರೀಕ್ಷೆಯ ಬಳಿಕ ನಿಖರವಾದ ಕಾರಣ ತಿಳಿಯಲಿದೆ.
ಫಿಲಿಪ್ ಅಮೌರ್ ಅವರ ಸಾವು ಹಾಲಿವುಡ್ ಸೇರಿದಂತೆ ಬಾಲಿವುಡ್‌ನ ಹಲವು ಸ್ಟಾರ್ ನಟರು ದಿಗ್ಭ್ರಮೆ ವ್ಯಕ್ತಪಡಿಸಿದ್ದು, ಅಮಿತಾಬ್ ಬಚ್ಚನ್, ಶಾರುಕ್ ಖಾನ್, ಶೇಖರ್ ಕಪೂರ್ ಸೇರಿದಂತೆ ಹಲವು ಬಾಲಿವುಡ್ ನಟರು ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಹಾಲಿವುಡ್ ಖ್ಯಾತ ನಟರಾದ ಫಿಲಿಪ್ ಅಮೌರ್ ಅವರು 2005ರಲ್ಲಿ 'ಕಪೋಟ್' ಎಂಬ ಚಿತ್ರದಲ್ಲಿನ ಅಮೋಘ ನಟನೆಗಾಗಿ ಆಸ್ಕರ್ ಪ್ರಶಸ್ತಿ ಪಡೆದಿದ್ದರು. ಅಲ್ಲದೆ 3 ಅಕಾಡೆಮಿ ಅವಾರ್ಡ್‌ಗಳನ್ನು ಕೂಡ ಪಡೆದಿದ್ದರು.