ಶಾಲೆಯನ್ನು ಹೈಜಾಕ್ ಮಾಡಿ ಇಬ್ಬರನ್ನು ಕೊಂದ ಬಂದೂಕುಧಾರಿ
ರಷ್ಯಾದ ಮಾಸ್ಕೋದಲ್ಲಿ ಬಂದೂಕುಧಾರಿಯೊಬ್ಬ ಶಾಲೆಯೊಂದನ್ನು ಹೈಜಾಕ್ ಮಾಡಿದ್ದು, ಪೊಲೀಸ್ ಅಧಿಕಾರಿ ಸೇರಿದಂತೆ ಇಬ್ಬರನ್ನು ಹತ್ಯೆಗೈದಿದ್ದಾನೆ.
ಮಾಸ್ಕೋ: ರಷ್ಯಾದ ಮಾಸ್ಕೋದಲ್ಲಿ ಬಂದೂಕುಧಾರಿಯೊಬ್ಬ ಶಾಲೆಯೊಂದನ್ನು ಹೈಜಾಕ್ ಮಾಡಿದ್ದು, ಪೊಲೀಸ್ ಅಧಿಕಾರಿ ಸೇರಿದಂತೆ ಇಬ್ಬರನ್ನು ಹತ್ಯೆಗೈದಿದ್ದಾನೆ.
ಬೆಳಗ್ಗೆ ಮಾಸ್ಕೋದ ಹೊರವಲಯದಲ್ಲಿರುವ ಖಾಸಗಿ ಶಾಲೆಯನ್ನು ಹೈಜಾಕ್ ಮಾಡಿದ್ದ ಶಸ್ತ್ರಸಜ್ಜಿತ ವ್ಯಕ್ತಿ ಸುಮಾರು 3 ಗಂಟೆಗಳ ಕಾಲ ಮಕ್ಕಳು ಮತ್ತು ಶಿಕ್ಷಕರನ್ನು ಒತ್ತೆಯಾಳುಗಳಾಗಿರಿಸಿಕೊಂಡಿದ್ದನು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಿಮಿಸಿದ ಪೊಲೀಸರು ಆತನ ಮನವೊಲಿಸುವ ಪ್ರಯತ್ನ ನಡೆಸಿದರಾದರೂ, ಸಫಲವಾಗಲಿಲ್ಲ. ಪೊಲೀಸರ ಮಧ್ಯಪ್ರವೇಶದಿಂದ ಕುಪಿತನಾದ ಆತ ಓರ್ವ ಶಿಕ್ಷಕರಿಗೆ ಗುಂಡುಹಾರಿಸಿ ಕೊಂದುಹಾಕಿದ್ದಾನೆ. ಅಲ್ಲದೆ ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸ್ ಅಧಿಕಾರಿಯನ್ನು ಕೂಡ ಆತ ಗುಂಡುಹಾರಿಸಿ ಕೊಂದು ಹಾಕಿದ್ದಾನೆ.
ಇದೀಗ ಪೊಲೀಸರು ಕಾರ್ಯಾಚರಣೆ ನಡೆಸಿ ಬಂದೂಕುಧಾರಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆತನಿಂದ ದೇಶೀ ನಿರ್ಮಿತ ಅತ್ಯಾಧುನಿಕ ಬಂದೂಕನ್ನು ವಶಪಡಿಸಿಕೊಂಡಿದ್ದಾರೆ.