ಪಾಕಿಸ್ತಾನದಲ್ಲಿ ಭಾರತೀಯ ಕೈದಿ ಹತ್ಯೆ
ಪಾಕಿಸ್ತಾನದ ಜೈಲಲ್ಲಿ ಮತ್ತೋರ್ವ ಭಾರತೀಯ ಕೈದಿಯನ್ನು ಹತ್ಯೆಗೈಯ್ಯಲಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಕರಾಚಿ: ಪಾಕಿಸ್ತಾನದ ಜೈಲಲ್ಲಿ ಮತ್ತೋರ್ವ ಭಾರತೀಯ ಕೈದಿಯನ್ನು ಹತ್ಯೆಗೈಯ್ಯಲಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಕರಾಚಿಯ ಲಾಂಧಿ ಜೈಲಿನಲ್ಲಿ ಕಿಶೋರ್ ಭಗವಾನ್ ಎಂಬ ಭಾರತೀಯ ಮೂಲದ ಕೈದಿಯನ್ನು ಹತ್ಯೆಗೈಯ್ಯಲಾಗಿದ್ದು, ಇಂದು ಬೆಳಗ್ಗೆ ಉಪಾಹಾರ ನೀಡುವ ಸಮಯದಲ್ಲಿ ವಿಷಯ ಬಹಿರಂಗಗೊಂಡಿದೆ. ಕಿಶೋರ್ ಭಗವಾನ್ ಕೈದಿಯನ್ನು ಸಹ ಕೈದಿಗಳೇ ಕೊಲೆಗೈದಿರುವ ಶಂಕೆ ಇದ್ದು, ಲಾಂಧಿ ಜೈಲು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಮೂಲತಃ ಮೀನುಗಾರನಾಗಿರುವ ಕಿಶೋರ್ ಭಗವಾನ್ ಕಳೆದ ಫೆಬ್ರವರಿ ತಿಂಗಳಿನಲ್ಲಿ ಮೀನು ಹಿಡಿಯುವಾಗ ಪಾಕಿಸ್ತಾನದ ಗಡಿಯೊಳಗೆ ಅಕ್ರಮ ಪ್ರವೇಶ ಮಾಡಿ ಪಾಕಿಸ್ತಾನದ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದನು. 2013ರ ಡಿಸೆಂಬರ್ ತಿಂಗಳಿನಲ್ಲಿ ಕರಾಚಿಯ ಲಾಂಧಿ ಜೈಲಿನಿಂದ ಕಿಶೋರ್ ಭಗವಾನ್ ತಪ್ಪಿಸಿಕೊಂಡು ಪರಾರಿಯಾಗಿದ್ದನು. ಕಾರ್ಯಾಚರಣೆ ನಡೆಸಿದ್ದ ಲಾಂಧಿ ಜೈಲು ಅಧಿಕಾರಿಗಳು ಆತನನ್ನು ಪುನಃ ಬಂಧಿಸಿ ಕರೆತಂದಿದ್ದರು.