ಮುಂಬೈ ಪ್ರೆಸ್ ಕ್ಲಬ್ ಮೇಲೆ ಶಿವಸೇನೆ ದಾಳಿ
ಸೂಫಿ ಬ್ಯಾಂಡ್ ಕುರಿತ ಪ್ರಚಾರ ಕಾರ್ಯಕ್ರಮದ ವೇಳೆ ಶಿವಸೇನಾ ಕಾರ್ಯಕರ್ತರು ಮುಂಬೈ ಪ್ರೆಸ್ ಕ್ಲಬ್ ಮೇಲೆ ದಾಳಿ ಮಾಡಿದ್ದಾರೆ.
ಮುಂಬೈ: ಸೂಫಿ ಬ್ಯಾಂಡ್ ಕುರಿತ ಪ್ರಚಾರ ಕಾರ್ಯಕ್ರಮದ ವೇಳೆ ಶಿವಸೇನಾ ಕಾರ್ಯಕರ್ತರು ಮುಂಬೈ ಪ್ರೆಸ್ ಕ್ಲಬ್ ಮೇಲೆ ದಾಳಿ ಮಾಡಿದ್ದಾರೆ.
ಮುಂಬೈನಲ್ಲಿ ಪಾಕಿಸ್ತಾನ ಮೂಲದ ಸೂಫಿ ಬ್ಯಾಂಡ್ ಕಾರ್ಯಕ್ರಮವನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಶಿವಸೇನಾ ಕಾರ್ಯಕರ್ತರು ಮುಂಬೈ ಪ್ರೆಸ್ ಕ್ಲಬ್ ಮೇಲೆ ದಾಳಿ ನಡೆಸಿದ್ದಾರೆ. ಸುಮಾರು 50 ರಿಂದ ನೂರು ಮಂದಿಯ ವರೆಗೆ ಇರುವ ಕಾರ್ಯಕರ್ತರು ಪ್ರೆಸ್ ಕ್ಲಬ್‌ನಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸಗೊಳಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನ ದೇಶವು ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದ್ದು, ಇದಕ್ಕಾಗಿ ತನ್ನ ಗುಪ್ತಚರ ಸಂಸ್ಥೆ ಐಎಸ್‌ಐ ಅನ್ನು ಬಳಸಿಕೊಳ್ಳುತ್ತಿದೆ. ಹೀಗಾಗಿ ಸಂಸ್ಕೃತಿಯ ಹೆಸರಲ್ಲಿ ಭಾರತಲ್ಲಿ ಭಯೋತ್ಪಾದನೆ ನಡೆಸಲು ಹವಣಿಸುತ್ತಿದೆ. ಹೀಗಾಗಿ ಪಾಕ್ ಮೂಲದ ಸೂಫಿ ಬ್ಯಾಂಡ್ ಅನ್ನು ಭಾರತದಲ್ಲಿ ನಿಷೇಧಿಸಬೇಕು ಎಂದು ಶಿವಸೇನೆ ಆಗ್ರಹಿಸಿದೆ.