ಯಾಸಿನ್ ಭಟ್ಕಳ್‌ನ ಮತ್ತೋರ್ವ ಸಹಚರನ ಬಂಧನ
ಲಷ್ಕರ್ ಉಗ್ರ ಯಾಸಿನ್ ಭಟ್ಕಳ್‌ನ ಮತ್ತೋರ್ವ ಸಹಚರನನ್ನು ಅಬುದಾಬಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಅಬುದಾಬಿ: ಲಷ್ಕರ್ ಉಗ್ರ ಯಾಸಿನ್ ಭಟ್ಕಳ್‌ನ ಮತ್ತೋರ್ವ ಸಹಚರನನ್ನು ಅಬುದಾಬಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಭಯೋತ್ಪದನಾ ಕೃತ್ಯಗಳಿಗೆ ಹಣ ದುರ್ಬಳಕೆ ಮಾಡುತ್ತಿದ್ದ ಆರೋಪದ ಮೇರೆಗೆ 'ಅಬ್ದುಲ್ ವಹೀಬ್' ಎಂಬಾತನನ್ನು ಅಬುದಾಬಿ ಪೊಲೀಸರು ಬಂಧಿಸಿದ್ದು, ಈತ ಲಷ್ಕರ್ ಉಗ್ರ ಯಾಸಿನ್ ಭಟ್ಕಳ್‌ನ ಸಹಚರ ಎಂದು ತಿಳಿದುಬಂದಿದೆ.
ಅಬ್ದುಲ್ ವಹೀಬ್ ಕಳೆದ 10 ವರ್ಷಗಳಿಂದ ಅಬುದಾಬಿಯಲ್ಲಿ ವಾಸಿಸುತ್ತಿದ್ದು, ನಿರಂತರ ಇಂಟರ್ನೆಟ್ ಸಂಪರ್ಕದಲ್ಲಿರುತ್ತಿದ್ದ ಕುರಿತು ಅನುಮಾನಗೊಂಡ ಅಬುದಾಬಿ ಪೊಲೀಸರು
ಅಬ್ದುಲ್ ವಹೀಬ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧನದ ಬಳಿಕ ವಿಚಾರಣೆ ನಡೆಸಿದ ಪೊಲೀಸರಿಗೆ ಸ್ಪೋಟಕ ಮಾಹಿತಿಗಳು ಲಭ್ಯವಾಗಿದ್ದು, ಬಂಧಿತ ಅಬ್ದುಲ್ ವಹೀಬ್ ಲಷ್ಕರ್ ಯಾಸಿನ್ ಭಟ್ಕಳ್ ಮತ್ತು ರಿಯಾಜ್ ಭಟ್ಕಳ್‌ರ ಸಹಚರ ಎಂದು ತಿಳಿದುಬಂದಿದೆ. ಅಲ್ಲದೆ ಯಾಸಿನ್ ಭಟ್ಕಳ್ ತಂದೆಗೆ ಈತ ಹತ್ತಿರದ ಸಂಬಂಧಿಯಾಗಿದ್ದು, ಯಾಸಿನ್‌ನೊಂದಿಗೆ ಸೇರಿ ಉಗ್ರಗಾಮಿ ಚಟುವಟಿಗಳಲ್ಲಿ ಭಾಗಿಯಾಗಿದ್ದ ಅಂಶ ಬೆಳಕಿಗೆ ಬಂದಿದೆ.
ಅಲ್ಲದೆ ಈತನ ವಿರುದ್ಧ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಹೊರಡಿಸಿದ್ದ ಅಂಶ ಕೂಡ ಬಹಿರಂಗಗೊಂಡಿದೆ. ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣ ಸ್ಪೋಟ, ಮುಂಬೈ ಮತ್ತು ಹೈದರಾಬಾದ್ ಸ್ಪೋಟಗಳಲ್ಲಿ ಈತನ ಪಾತ್ರದ ಕುರಿತು ಶಂಕೆ ವ್ಯಕ್ತಪಡಿಸಿರುವ ರಾಷ್ಟ್ರೀಯ ಭದ್ರತಾ ಅಧಿಕಾರಿಗಳು ವಿಚಾರಣೆಗಾಗಿ ಅಬುದಾಬಿಗೆ ತೆರಳಲು ಸಜ್ಜಾಗುತ್ತಿದ್ದಾರೆ.