ಜಗತ್ತಿನ ಅಚ್ಚರಿಗಳಲ್ಲಿ 'ತಾಜ್‌ಮಹಲ್' ಚಂದ್ರು
3 ಭಾಷೆಗಳಲ್ಲಿ ಒಟ್ಟಾರೆ ಹತ್ತಿರ ಹತ್ತಿರ..
ಬೆಂಗಳೂರು: 3 ಭಾಷೆಗಳಲ್ಲಿ ಒಟ್ಟಾರೆ ಹತ್ತಿರ ಹತ್ತಿರ ಸಾವಿರ ಚಿತ್ರ ಮಂದಿರಗಳಲ್ಲಿ ಉಪ್ಪಿ ಬ್ರಹ್ಮನ ದರ್ಶನ ಮಾಡಿಸುವ ಯೋಜನೆ ನಿರ್ದೇಶಕ ಆರ್. ಚಂದ್ರು ಅವರದ್ದು.
ಅಂದರೆ ಕರ್ನಾಟಕದಲ್ಲಿ ಪ್ರಸ್ತುತ ಇರುವ ಎಲ್ಲಾ 750 ಸ್ಕ್ರೀನ್‌ಗಳು ಸೇರಿದಂತೆ ತಮಿಳುನಾಡು ಮತ್ತು ಆಂಧ್ರ ಪ್ರದೇಶಗಳಲ್ಲಿರುವ 250 ಸ್ಕ್ರೀನ್‌ಗಳನ್ನೂ 'ಬ್ರಹ್ಮ' ಆವರಿಸಬೇಕಾಗಿದೆ. ಒಂದು ವೇಳೆ ಹೀಗೇನಾದರೂ ಆದರೆ ಜಗತ್ತಿನ ಅಚ್ಚರಿಗಳಲ್ಲಿ 'ತಾಜ್ ಮಹಲ್' ಚಂದ್ರು ಸೇರಲಿದ್ದಾರೆ. ಸಾವಿರ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗುವುದು ಎಷ್ಟರ ಮಟ್ಟಿಗೆ ತಾರ್ಕಿಕ ಮಾತು? ಎಂದು ಗಾಂಧಿನಗರ ಮಾತನಾಡುತ್ತಿದೆ. ಇಂಥ ಸಾವಿರ ಸುಳ್ಳು ಹೇಳಿಯೇ ಒಂದು ಚಿತ್ರ ಮಡಲಾಗುತ್ತದೆಯೇ! ಎಂದು ಚಂದ್ರು ಅವರೇ ಉತ್ತರಿಸಬೇಕು.
ಅಂದಹಾಗೆ ಬ್ರಹ್ಮನನ್ನು ಅವರ ಜನ್ಮದಿನದಂದೇ ಬಿಡುಗಡೆ ಮಾಡುವ ಸಂಭ್ರಮದಲ್ಲಿದ್ದಾರೆ ನಿರ್ದೇಶಕ ಆರ್ ಚಂದ್ರು. ಬ್ರಹ್ಮನನ್ನೇ ಹುಟ್ಟಿಸಿರುವ ಚಂದ್ರು ಅವರು ಹುಟ್ಟುಹಬ್ಬದ ದಿನ ಜನರಿಗೆ ಒಳ್ಳೆಯ ಕಾಣಿಕೆ ಕೊಟ್ಟರೆ ಸಾಕು ಎನ್ನುತ್ತಿದ್ದಾರೆ ಚಂದ್ರು ಅಭಿಮಾನಿಗಳು.