ಸಿಎಂ ಸ್ಥಾನಕ್ಕೆ ಕೇಜ್ರಿವಾಲ್ ರಾಜಿನಾಮೆ
ದೆಹಲಿ ವಿಧಾನಸಭೆಯಲ್ಲಿ ಜನಲೋಕಪಾಲ್ ಮಸೂದೆಯನ್ನು ಮಂಡನೆಯಾಗದ ಹಿನ್ನಲೆಯಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ..
ನವದೆಹಲಿ: ದೆಹಲಿ ವಿಧಾನಸಭೆಯಲ್ಲಿ ಜನಲೋಕಪಾಲ್ ಮಸೂದೆಯನ್ನು ಮಂಡನೆಯಾಗದ ಹಿನ್ನಲೆಯಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ವಿಧಾನಸಭೆ ಅಧಿವೇಶನದ ಬಳಿಕೆ ದೆಹಲಿ ಸಚಿವ ಸಂಪುಟ ಸಭೆ ನಡೆಸಿದ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಸಂಪುಟ ಸಭೆ ಬಳಿಕೆ ದೆಹಲಿ ಆಪ್ ಕಚೇರಿಗೆ ಆಗಮಿಸಿದ ಅವರು ಉಪರಾಜ್ಯಪಾಲ ಉಪರಾಜ್ಯಪಾಲ ನಜೀಬ್ ಜಂಗ್ಅವರಿಗೆ ರಾಜಿನಾಮೆ ಪತ್ರವನ್ನು ರವಾನಿಸಿದ್ದಾರೆ. ಇದಕ್ಕೂ ಮೊದಲು ದೆಹಲಿ ವಿಧಾನಸಭೆ ಕಲಾಪದ ಬಳಿಕ ಮಾತನಾಡಿದ್ದ ಕೇಜ್ರಿವಾಲ್ ಅವರು, ಲೋಕಪಾಲ್ ಜಾರಿಯಾಗದಿದ್ದರೆ ಒಂದು ಬಾರಿಯಲ್ಲ ಸಾವಿರ ಬಾರಿ ಮುಖ್ಯಮಂತ್ರಿ ಸ್ಥಾನವನ್ನು ತ್ಯಜಿಸಲು ಸಿದ್ಧ ಎಂದು ಹೇಳಿದ್ದರು.
ಕೇಜ್ರಿವಾಲ್ ಅವರ ರಾಜಿನಾಮೆ ಮೂಲಕ ನಲವತ್ತೊಂಬತ್ತು ದಿನಗಳ ದೆಹಲಿ ಸರ್ಕಾರ ಬಹುತೇಕ ಅಂತ್ಯವಾಗಿದೆ.