ಪ್ರೇಮಾ ಕುಟುಂಬದ ವಿರುದ್ಧ ದೂರು
ರಾಮದಾಸ್ ಹೇಳಿಕೆಯನ್ನು ಆಧರಿಸಿ ಪ್ರೇಮಾ ಕುಮಾರಿ ಕುಟುಂಬದ ವಿರುದ್ಧ ದೂರು
ಮೈಸೂರು: ಮಾಜಿ ಸಚಿವ ರಾಮದಾಸ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೇಮಾ ಕುಮಾರಿ ಅವರ ಕುಟುಂಬದ ವಿರುದ್ಧ ದೂರು ದಾಖಲಿಸಲಾಗಿದೆ.
ಪ್ರೇಮಾ ಕುಮಾರಿ ಸೇರಿದಂತೆ ಅವರ ತಾಯಿ ಲೀಲಾವತಿ ಮತ್ತು ಸೋದರ ಮಂಜುನಾಥ್ ವಿರುದ್ಧ ದೂರು ದಾಖಲಿಸಲಾಗಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇರೆಗೆ ಐಪಿಸಿ ಸೆಕ್ಷನ್ 384, 511, 506ರ ಅಡಿಯಲ್ಲಿ ರಾಮದಾಸ್ ಅವರ ಬೆಂಬಲಿಗರು ಮೈಸೂರಿನ ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆತ್ಮಹತ್ಯೆಗೆ ಪ್ರಯತ್ನಿಸಿ ಅಸ್ವಸ್ಥರಾಗಿದ್ದ ಮಾಜಿ ಸಚಿವ ರಾಮದಾಸ್ ಅವರು ನಿನ್ನೆಯಷ್ಟೇ ಬಿಜಿಎಸ್ ಅಪೋಲೋ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ವಾಪಸಾಗಿದ್ದರು. ಮನೆಗೆ ವಾಪಸಾದ ನಂತರ ಅವರ ಹೇಳಿಕೆಯನ್ನು ಆಧರಿಸಿ ಅವರ ಬೆಂಬಲಿಗರು ದೂರು ದಾಖಲಿಸಿದ್ದಾರೆ.