'ತೆಲಂಗಾಣ' ಅಂಗೀಕಾರ: ರಾಜಕೀಯ ಸನ್ಯಾಸತ್ವ ಸ್ವೀಕರಿಸಿದ ಲಗಡಪಾಟಿ
ಪೆಪ್ಪರ್ ಸ್ಪ್ರೇ ಮಾಡಿ ಕುಖ್ಯಾತಿ ಪಡೆದಿದ್ದ ಸಂಸದ ರಾಜಗೋಪಾಲ ಅವರು, ತೆಲಂಗಾಣ ವಿಧೇಯಕ ಅಂಗೀಕಾರ ವಿಚಾರದಿಂದ ನೊಂದು ರಾಜಕೀಯ ಸನ್ಯಾಸತ್ವ ಸ್ವೀಕರಿಸಿದ್ದಾರೆ.
ಹೈದರಾಬಾದ್: ಸಂಸತ್ತಿನಲ್ಲಿ ಪೆಪ್ಪರ್ ಸ್ಪ್ರೇ ಮಾಡಿ ಕುಖ್ಯಾತಿ ಪಡೆದಿದ್ದ ವಿಜಯವಾಡ ಸಂಸದ ಲಗಡಪಾಟಿ ರಾಜಗೋಪಾಲ ಅವರು, ತೆಲಂಗಾಣ ವಿಧೇಯಕ ಅಂಗೀಕಾರ ವಿಚಾರದಿಂದ ನೊಂದು ರಾಜಕೀಯ ಸನ್ಯಾಸತ್ವ ಸ್ವೀಕರಿಸಿದ್ದಾರೆ.
ಕೇಂದ್ರ ಸರ್ಕಾರದ ಈ ಕ್ರಮವನ್ನು ತೀವ್ರವಾಗಿ ವಿರೋಧಿಸಿರುವ ಲಗಡಪಾಟಿ ರಾಜಗೋಪಾಲ್ ಅವರು, ತಾವು ರಾಜಕೀಯ ಸನ್ಯಾಸತ್ವ ಸ್ವೀಕರಿಸುವುದಾಗಿ ತಿಳಿಸಿದ್ದಾರೆ.