ದ.ಭಾರತದ ಮೊದಲ 'ಬುಡಕಟ್ಟು ವಸ್ತುಸಂಗ್ರಹಾಲಯ' ಲೋಕಾಪ೯ಣೆ
ದಕ್ಷಿಣ ಭಾರತದ ಮೊಟ್ಟ ಮೊದಲ `ಬುಡಕಟ್ಟು ವಸ್ತುಸಂಗ್ರಹಾಲಯವನ್ನು ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಲೋಕಾಪ೯ಣೆ ಮಾಡಲಾಯಿತು.
ಬೆಂಗಳೂರು: ದಕ್ಷಿಣ ಭಾರತದ ಮೊಟ್ಟ ಮೊದಲ `ಬುಡಕಟ್ಟು ವಸ್ತುಸಂಗ್ರಹಾಲಯವನ್ನು ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ತೆರೆಯಲಾಗಿದ್ದು, ಮಂಗಳವಾರ ಖ್ಯಾತ ಚಿತ್ರನಟ ಮತ್ತು ನಿಮಾ೯ಪಕ ರಾಘವೇಂದ್ರ ರಾಜ್ ಕುಮಾರ್ ಅವರು ವಸ್ತು ಸಂಗ್ರಹಾಲಯವನ್ನು ಉದ್ಘಾಟಿಸಿದರು.
ಉದ್ಘಾಟನಾ ಕಾಯ೯ಕ್ರಮದಲ್ಲಿ ಶಾಸಕ ಮತ್ತು ನಿಮಾ೯ಪಕ ಮುನಿರತ್ನ, ಕನಾ೯ಟಕ ಚಲನಚಿತ್ರ ವಾಣಿಜ್ಯಮಂಡಳಿಯ ಅಧ್ಯಕ್ಷ ಎಚ್ ಡಿ ಗಂಗರಾಜು, ಕೇಂದ್ರ ಟ್ರೈಫೆಡ್ ನ ವ್ಯವಸ್ಥಾಪಕ ನಿದೇ೯ಶಕ ಅಶೋಕ್ ಕುಮಾರ್ ಅನ್ಗುರಾಣ,ರಾಜ್ಯ ಪ್ರವಾಸೋದ್ಯಮ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದಶಿ೯ ಅರವಿಂದ್ ಜಾಧವ್ ಹಾಗೂ ಡಿಎಸ್ ಕೆ ಲೀಗಲ್ ನ ಪಾಲುದಾರರಾದ ಅಜೇಶ್ ಕುಮಾರ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಸ್ತುಸಂಗ್ರಹಾಲಯದ ಬಗ್ಗೆ ಮಾತನಾಡಿದ ಇನ್ನೋವೇಟಿವ್ ಫಿಲ್ಮ್ ಸಿಟಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿದೇ೯ಶಕ ಸರವಣ ಪ್ರಸಾದ್ ಅವರು,`ಇದೇ ಮೊಟ್ಟ ಮೊದಲ ಬಾರಿಗೆ ಕೇಂದ್ರ ಸಕಾ೯ರದ ಬುಡಕಟ್ಟು ಸಹಕಾರ ಮಾರುಕಟ್ಟೆ ಅಭಿವೃದ್ದಿ ಇಲಾಖೆಯ (ಟ್ರೈಫೆಡ್) ಸಹಯೋಗದೊಂದಿಗೆ ನಮ್ಮ ಮನರಂಜನಾ ಕ್ಷೇತ್ರದ ಜೊತೆಜೊತೆಗೆ ನವೀನ ಮಾದರಿಯ ಈ ವಸ್ತು ಸಂಗ್ರಹಾಲಯವನ್ನು ಪ್ರಾರಂಭ ಮಾಡುತ್ತಿರುವುದಕ್ಕೆ ಸಂತಸವಾಗುತ್ತಿದೆ. ಇದರ ಉದ್ದೇಶ ದೇಶದ ಎಲ್ಲಾ ಭಾಗದ ಸಮುದಾಯದ ವಿವಿಧ ನಮೂನೆಯ ವಸ್ತುಗಳ ಪರಿಚಯ ಮತ್ತು ಅದರ ಉತ್ಪನ್ನಗಳ ಮಾರಾಟವನ್ನು ಜನತೆಗೆ ಲಭ್ಯವಾಗುವುದರ ಜೊತೆಗೆ ನಮ್ಮ ಮನರಂಜನಾ ಸ್ಥಳಗಳನ್ನು ಜನತೆ ವೀಕ್ಷಿಸಬಹುದಾಗಿದೆ. ಇದರ ಸಂಪೂರ್ಣ ಪ್ರಯೋಜನವನ್ನು ಜನತೆ ಪಡೆದುಕೊಳ್ಳಬಹುದು ಎಂದು ಹೇಳಿದರು.